ನಿಮ್ಮ ಸ್ಕಿನ್ ಟೈಪ್ ಯಾವುದು ಎಂದು ತಿಳಿದುಕೊಳ್ಳುವುದು ಹೇಗೆ?
ನಿಮ್ಮ ಚರ್ಮದ ಆರೈಕೆಯ ವಿಷಯಕ್ಕೆ ಬಂದಾಗ ನಿಮ್ಮ ಸ್ಕಿನ್ ಟೈಪ್ ತಿಳಿದುಕೊಳ್ಳುವುದು ಅಗತ್ಯ.
ಯಾಕೆಂದರೆ ನೀವು ಸ್ಕಿನ್ ಟೈಪ್ ತಿಳಿಯದೇ ಕೆಲವೊಂದು ಉತ್ಪನ್ನಗಳನ್ನು ಬಳಸಿದಾಗ ಚರ್ಮಕ್ಕೆ ಹಾನಿಯುಂಟು ಮಾಡಬಹುದು.
ಆದ್ದರಿಂದ ನಿಮ್ಮ ಸ್ಕಿನ್ ಟೈಪ್ ತಿಳಿದುಕೊಂಡು ಅದಕ್ಕೆ ಹೊಂದುವ ಉತ್ಪನ್ನಗಳನ್ನು ಬಳಸಿ.
ಚರ್ಮದ ಪ್ರಕಾರಗಳಲ್ಲಿ ಒಣ, ಎಣ್ಣೆಯುಕ್ತ, ಸಂಯೋಜನೆ ಹಾಗೂ ಮೊಡವೆಯುಕ್ತ ಚರ್ಮಗಳನ್ನು ಕಾಣಬಹುದು.
ಮುಖ ತೊಳೆದ ನಂತರ ಟಿಶ್ಯೂನಿಂದ ಮುಖ ಒರೆಸಿ ಎಣ್ಣೆಯಂಶ ಕಂಡು ಬಂದರೆ ನಿಮ್ಮದು ಎಣ್ಣೆಯುಕ್ತ ಚರ್ಮ
ಮುಟ್ಟಿದ್ದಾಗ ಬಿಗಿಯಾಗಿದ್ದರೆ ಒಣ ಚರ್ಮ ಹಾಗೂ ಜಿಡ್ಡಿನಂತಿದ್ದರೆ ಎಣ್ಣೆಯುಕ್ತ ಚರ್ಮವಾಗಿರುತ್ತದೆ.
ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿದಾಗ ಮುಖ ಹೊಳೆಯುತ್ತಿದ್ದರೆ ಎಣ್ಣೆಯುಕ್ತ ಚರ್ಮ.
ನಿಮ್ಮ ಚರ್ಮದ ಪ್ರಕಾರವನ್ನು ಗುರುತಿಸಲು ಸಾಧ್ಯವಾಗದಿದ್ದರೆ ಚರ್ಮಶಾಸ್ತ್ರಜ್ಞರ ಸಹಾಯ ಪಡೆಯಿರಿ.