ಫೌಂಡೇಶನ್ ಕ್ರೀಮ್ ಖರೀದಿಸುವಾಗ ಈ ತಪ್ಪು ಮಾಡದಿರಿ
ಸರಿಯಾದ ಫೌಂಡೇಶನ್ ಕ್ರೀಮ್ ಸೆಲೆಕ್ಟ್ ಮಾಡುವುದೇ ದೊಡ್ಡ ಸಮಸ್ಯೆ ಎಂದು ಮಹಿಳೆಯರು ಹೇಳುವುದುಂಟು.
ಆದ್ದರಿಂದ ಸರಿಯಾದ ಫೌಂಡೇಶನ್ ಕ್ರೀಮ್ ಖರೀದಿಸಲು ಈ ಟಿಪ್ಸ್ ಫಾಲೋ ಮಾಡಿ
ಕೈ ಮೇಲೆ ಹಚ್ಚಿ ನೋಡಬೇಡಿ. ಯಾಕೆಂದರೆ ನಿಮ್ಮ ಮುಖ ಹಾಗೂ ಕೈಗಳ ಬಣ್ಣ ಭಿನ್ನವಾಗಿರುತ್ತದೆ.
ನಿಮ್ಮ ಚರ್ಮವು ಎಣ್ಣೆಯುಕ್ತವೇ, ಒಣ ಚರ್ಮವೇ ಅಥವಾ ಸೂಕ್ಷ್ಮ ಚರ್ಮವೇ ಮೊದಲು ತಿಳಿದುಕೊಳ್ಳಿ.
ಕೆಲವೊಮ್ಮೆ ದುಬಾರಿ ಬೆಲೆ ಫೌಂಡೇಶನ್ ಕ್ರೀಮ್ ಖರೀದಿಸಿ ಅದು ನಿಮ್ಮ ತ್ವಚೆಯ ಬಣ್ಣಕ್ಕಿಂತ ಭಿನ್ನವಾಗಿರುತ್ತದೆ.
ಆದ್ದರಿಂದ ಖರೀದಿಸುವ ಮುನ್ನ ಆ ಉತ್ಪನ್ನದ ರಿವ್ಯೂವ್ ನೋಡಿ ತೆಗೆದುಕೊಳ್ಳಿ
ದವಡೆಯ ಭಾಗಕ್ಕೆ ಮೊದಲು ಹಚ್ಚಿ. ಇದರಿಂದ ನಿಮ್ಮ ಮುಖದ ಸರಿಯಾದ ಬಣ್ಣ ತಿಳಿಯಲು ಸಾಧ್ಯ.
ಕಡಿಮೆ ಬೆಲೆಗೆ ಸಿಗುತ್ತಿದೆ ಎಂದು ಖರೀದಿಸಬೇಡಿ. ಕೆಲವೊಂದು ಉತ್ಪನ್ನ ತ್ವಚೆಗೆ ಹಾನಿಯುಂಟು ಮಾಡಬಹುದು.