ಮನೆಯಲ್ಲಿಯೇ ಹೊಳೆಯುವ ತ್ವಚೆಗಾಗಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಹೊಳೆಯುವ ಕಾಂತಿಯುತ ತ್ವಚೆ ನನ್ನದಾಗಬೇಕು ಎಂಬುದು ಪ್ರತಿಯೊಬ್ಬರ ಕನಸು.
ಅದಕ್ಕಾಗಿ ಸಾಕಷ್ಟು ದುಬಾರಿ ಬೆಲೆಯ ಸೌಂದರ್ಯ ವರ್ಧಕಗಳನ್ನು ಖರೀದಿಸುವುದುಂಟು.
ಆದರೆ ಮನೆಯಲ್ಲಿಯೇ ನೀವು ಈ ಸಿಂಪಲ್ ಟಿಪ್ಸ್ ಪ್ರಯೋಗಿಸಿ ಹೊಳೆಯುವ ತ್ವಚೆಯನ್ನು ಪಡೆಯಬಹುದು.
ಅರಶಿನ, ಕಡಲೆ ಹಿಟ್ಟು, ಹಾಲು ಮತ್ತು ರೋಸ್ ವಾಟರ್ನ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ.
ಜೇನು ತುಪ್ಪ ತ್ವಚೆಯ ಕಾಂತಿಯನ್ನು ಹೆಚ್ಚಿಸುವಲ್ಲಿ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಆಲಿವ್ ಎಣ್ಣೆ ಚರ್ಮದ ಹಾನಿಯನ್ನು ತಡೆದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ,ರೋಸ್ ವಾಟರ್ ಸೇರಿಸಿ ನಯವಾದ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ.
ಅಲೋವೆರಾ ಹೊಳೆಯುವ ಚರ್ಮವನ್ನು ಪಡೆಯಲು ಮತ್ತೊಂದು ಮನೆ ಮದ್ದು, ಇದು ಚರ್ಮದ ಕಾಂತಿ ಹೆಚ್ಚಿಸುತ್ತದೆ.