ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ಆಹಾರಗಳು
ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.
ಬೆರ್ರಿ ಹಣ್ಣಿನ ಸೇವನೆ ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ.
ಟೊಮೆಟೋದಲ್ಲಿ ವಿಟಮಿನ್ ಸಿ, ಕೆ ಹಾಗೂ ಬಯೋಟಿನ್ ಹೇರಳವಾಗಿದ್ದು, ಚರ್ಮಕ್ಕೆ ಪೋಷಣೆ ನೀಡುತ್ತದೆ.
ಕ್ಯಾರೆಟ್ ಸೇವನೆ ನಿಮ್ಮ ಚರ್ಮ ಹಾಗೂ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ತುಂಬಾ ಒಳ್ಳೆಯದು.
ಬ್ರೊಕೊಲಿಯಲ್ಲಿ ವಿಟಮಿನ್ ಸಿ, ಪೋಲೇಟ್ ಹೇರಳವಾಗಿದ್ದು, ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಪಾಲಕ್ ಸೊಪ್ಪಿನಲ್ಲಿ ಕಬ್ಬಿನಾಂಶವು ಹೇರಳವಾಗಿದ್ದು, ಇದು ತ್ವಚೆಯ ಕಾಂತಿ ಹೆಚ್ಚಿಸುತ್ತದೆ.
ಆವಕಾಡೋ ತಿನ್ನುವುದರಿಂದ ಅಥವಾ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
ಡಾರ್ಕ್ ಚಾಕೋಲೇಟ್ ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸಿ, ಕಾಂತಿ ನೀಡುತ್ತದೆ.