09 June 2024

ಶೀಘ್ರದಲ್ಲೇ ಆರಂಭವಾಗಲಿದೆ ಬೆಂಗಳೂರಿನ 2ನೇ ಅಧಿಕೃತ ಫುಡ್​​ ಸ್ಟ್ರೀಟ್​

Author :Akshatha Vorkady

2ಕೋಟಿ ಮೌಲ್ಯದ ಯೋಜನೆ

2ನೇ ಅಧಿಕೃತ ಫುಡ್​​ ಸ್ಟ್ರೀಟ್ ಕಾಮಗಾರಿಗೆ 2ಕೋಟಿ ರೂ. ಬಿಡುಗಡೆಮಾಡಿದ ಬಿಬಿಎಂಪಿ

ಯೋಜನೆ ಪೂರ್ಣ

ಮೂರು ತಿಂಗಳೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. 

ಫುಡ್​​ ಸ್ಟ್ರೀಟ್

ಯಲಹಂಕ ನ್ಯೂ ಟೌನ್​​ನ ಶೇಷಾದ್ರಿಪುರಂ ಕಾಲೇಜು ಬಳಿ ದೊಡ್ಡ ಬಳ್ಳಾಪುರ ರಸ್ತೆ ಮತ್ತು ಮೇಜರ್​​ ಸಂದೀಪ್​​​​ ಉಣ್ಣಿಕೃಷ್ಣನ್​​​ ರಸ್ತೆಗೆ ಹೊಂದಿಕೊಂಡಂತೆ 500 ಮೀ​​ ರಸ್ತೆಯಲ್ಲಿ ಫುಡ್​​ ಸ್ಟ್ರೀಟ್​.

3ಕೋಟಿ ರೂ.

ಅಧಿಕಾರಿಗಳ ಪ್ರಕಾರ, ಪಾಲಿಕೆಯು ಆರಂಭದಲ್ಲಿ ಬೀದಿಯನ್ನು ಅಭಿವೃದ್ಧಿ ಪಡಿಸಲು 3ಕೋಟಿ ರೂ.ಗಳನ್ನು ಮಂಜೂರು ಮಾಡಿತ್ತು. 

ವಿದ್ಯುತ್​​ ಕೆಲಸ

ಸುಮಾರು 22ಅಂಗಡಿಗಳ ನಿರ್ಮಾಣವನ್ನು ಬಹುತೇಕ ಪೂರ್ಣಗೊಂಡಿದ್ದು ಮತ್ತು ವಿದ್ಯುತ್​​ ಕೆಲಸಗಳು ನಡೆಯುತ್ತಿವೆ. 

ಅಭಿವೃದ್ಧಿ ಕಾಮಗಾರಿ

ರಸ್ತೆ ಬೆಂಚುಗಳ ಅಭಿವೃದ್ಧಿ ಕಾಮಗಾರಿ ಬಾಕಿ ಉಳಿದಿದ್ದು, ಇನ್ನೆರಡು ಮೂರು ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2ಕೋಟಿ ಮೌಲ್ಯದ ಯೋಜನೆ

ಸಾರ್ವಜನಿಕರು ಕಸ ಸುರಿಯಲು ಬಳಸುತ್ತಿದ್ದರಿಂದ ಬಿಬಿಎಂಪಿ ರಸ್ತೆಯನ್ನು ಆಯ್ಕೆ ಮಾಡಿದೆ. ಪಾಲಿಕೆ ಇದೀಗ ಸ್ಥಳವನ್ನು ಸ್ವಚ್ಛಗೊಳಿಸಿದೆ. 

ಸಣ್ಣ ಅಂಗಡಿ

ಬಿಬಿಎಂಪಿ ಸಣ್ಣ ಅಂಗಡಿಗಳನ್ನು ನಿರ್ಮಿಸಿ ಹಾಗೂ ಸಾರ್ವಜನಿಕರಿಗೆ ಕುಳಿತು ಕೊಳ್ಳಲು ಮತ್ತು ರಸ್ತೆಯನ್ನು ಸುಂದರಗೊಳಿಸುತ್ತಿದೆ. 

ಗ್ರಾನೈಟ್

ರಸ್ತೆಗೆ ಪಾಲಿಶ್​​​ ಮಾಡಿದ ಗ್ರಾನೈಟ್​​​, ಕಲ್ಲುಗಳನ್ನು ಹಾಕಿ ವಿವಿಧ ಮಾದರಿಯಲ್ಲಿ ಗ್ರಿಲ್​ಗಳನ್ನು ಅಳವಡಿಸಲಾಗಿದೆ.