ಚಿಲ್ಲರೆ ಸಮಸ್ಯೆಗೆ ಬಿತ್ತು ಬ್ರೇಕ್​: ಬಿಎಂಟಿಸಿ ಟಿಕೆಟ್​ ಖರೀದಿಗೆ ಬಂತು UPI

12 January 2025

Author: Vivek Biradar 

ಬಿಎಂಟಿಸಿ ಬಸ್​​ನಲ್ಲಿ ನಿತ್ಯ ಲಕ್ಷಾಂತರ ಜನರು ಸಂಚರಿಸುತ್ತಾರೆ. ಎಷ್ಟೋ ಸಾರಿ ಟಿಕೆಟ್ ಖರೀದಿ ವೇಳೆ ಪ್ರಯಾಣಿಕರಿಗೆ ಚಿಲ್ಲರೆ ನೀಡುವುದು ಸಮಸ್ಯೆಯಾಗುತ್ತದೆ. 

ಹಾಗೇ, ಪ್ರಯಾಣಿಕರಿಗೆ ಚಿಲ್ಲರೆ ನೀಡಲು ನಿರ್ವಾಹಕರ ಬಳಿಯೂ ಚಿಲ್ಲರೆ ಇರುವುದಿಲ್ಲ. ಇದರಿಂದ ನಿರ್ವಾಹಕರು ಪರದಾಡುತ್ತಾರೆ.

ಈ ಸಮಸ್ಯೆಗೆ ಬ್ರೇಕ್​ ಹಾಕಲು ಬೆಂಗಳೂರು ಮಹಾನಗರ ಸಾರಿಗೆ ಯುಪಿಐ ಪರಿಚಯಿಸಿದೆ. ಕೆಎಸ್​ಆರ್​ಟಿಸಿಯಲ್ಲಿ ಚಾಲ್ತಿಯಲ್ಲಿರುವ ಯುಪಿಐ ಮೂಲಕ ಟಿಕೆಟ್​ ಖರೀದಿ ಬಿಎಂಟಿಸಿಗೂ ಕಾಲಿಟ್ಟಿದೆ. 

ಬಿಎಂಟಿಸಿ ಬಸ್​ ಪ್ರಯಾಣಿಕರು ಇನ್ಮುಂದೆ ಚಿಂತಿಸುವ ಚಿಲ್ಲರೆ ಸಮಸ್ಯೆಯಿಂದ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನೀವು ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್​ ಖರೀದಿಸಬಹುದಾಗಿದೆ. 

ನಿರ್ವಾಹಕರ ಬಳಿ ಇರುವ ಯುಪಿಐ ಅನ್ನು ಸ್ಕ್ಯಾನ್​ ಮಾಡಿ, ಹಣ ಪಾವತಿಸಿ, ಟಿಕೆಟ್​ ಪಡೆಯಬಹುದಾಗಿದೆ. 

ಶನಿವಾರದಿಂದ ಇದು ಜಾರಿಗೆ ಬಂದಿದ್ದು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ. 

ಇತ್ತೀಚಿಗಷ್ಟೆ ಸಾರಿಗೆ ಇಲಾಖೆ ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮದ ಬಸ್​​ಗಳ ಟಿಕೆಟ್​ ದರ ಏರಿಕೆ ಮಾಡಿತ್ತು.   

Next:-  ತೂಕ ಕಡಿಮೆ ಮಾಡಿಕೊಳ್ಳಲು ಇದಕ್ಕಿಂತ ಸುಲಭ ಉಪಾಯ ಮತ್ತೊಂದಿಲ್ಲ