18 January 2025
Author: Ganapathi Sharma
ಬಿ ಖಾತಾ ಹೊಂದಿದ್ದವರು ಅದನ್ನು ಎ ಖಾತಾಗೆ ವರ್ಗಾಯಿಸಿಕೊಳ್ಳಲು ಬಿಬಿಎಂಪಿ ಅವಕಾಶ ನೀಡಿದೆ.
ಆಸ್ತಿಯ ಪ್ರಮಾಣಕ್ಕೆ ಅನುಗುಣವಾಗಿ ಬೆಟರ್ಮೆಂಟ್ ಫೀಸ್ (ಅಭಿವೃದ್ಧಿ ಶುಲ್ಕ) ಪಾವತಿ ಮಾಡಿ ಬಿ ಖಾತಾವನ್ನು ಎ ಖಾತಾಗೆ ವರ್ಗಾವಣೆ ಮಾಡಿಕೊಳ್ಳಬಹುದು.
ಬಿ ಖಾತಾವನ್ನು ಎ ಖಾತಾಗೆ ವರ್ಗಾವಣೆ ಮಾಡಲು ಆನ್‌ಲೈನ್ ಹಾಗೂ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಬಿಬಿಎಂಪಿ ಅವಕಾಶ ನೀಡಿದೆ.
ಆನ್‌ಲೈನ್ ಮೂಲಕ ಮಾಡುವುದಾದರೆ, ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಖಾತಾ ಪ್ರಮಾಣಪತ್ರ ಆಯ್ಕೆಯಲ್ಲಿ ‘ಆನ್‌ಲೈನ್ ಖಾತಾ ವರ್ಗಾವಣೆ' ಆಯ್ಕೆ ಕ್ಲಿಕ್ ಮಾಡಿ.
ಅಗತ್ಯ ವಿವರಗಳನ್ನು ಭರ್ತಿ ಮಾಡಿ ಲಾಗಿನ್ ಆಗಿ. ನಂತರ ಖಾತಾ ವರ್ಗಾವಣೆ ಆಯ್ಕೆ ಕ್ಲಿಕ್ ಮಾಡಿ.
ಆಸ್ತಿ ವಿವರಗಳು, ಮಾಲೀಕರ ವಿವರಗಳು ಮತ್ತು ಆಸ್ತಿ ಖರೀದಿ ದಾಖಲೆಗಳು, ಇತ್ತೀಚಿನ ತೆರಿಗೆ ರಸೀದಿ ಹಾಗೂ ಇತರ ಮಾಹಿತಿ ಭರ್ತಿ ಮಾಡಿ. ಎಲ್ಲಾ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
ನಂತರ ಆನ್‌ಲೈನ್ ಮೂಲಕ ಸುಧಾರಣೆ ಶುಲ್ಕ ಪಾವತಿ ಮಾಡಿ ಅರ್ಜಿಯನ್ನು ಸಬ್ಮಿಟ್ ಮಾಡಿ. ಆಫ್ಲೈನ್ ಮೂಲಕವಾದರೆ, ಸಮೀಪದ ಬಿಬಿಎಂಪಿ ಕಚೇರಿಗೆ ತೆರಳಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
NEXT - ಎ ಮತ್ತು ಬಿ ಖಾತಾ ಎಂದರೇನು? ಗುರುತಿಸುವುದು ಹೇಗೆ, ಬಿ ಖಾತಾ ಇದ್ದರೆ ಏನು ಮಾಡಬೇಕು?