ಕನ್ನಡಮಾತೆ ಭುವನೇಶ್ವರಿ ದೇವಿಯ ದೇವಾಲಯ ಎಲ್ಲಿದೆ ಗೊತ್ತಾ?

ಶ್ರೀ ಭುವನೇಶ್ವರಿ,ಭುವನಗಿರಿ ದೇವಾಲಯವು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನಲ್ಲಿದೆ.

ಸಿದ್ಧಾಪುರದಿಂದ ಭುವನಗಿರಿಗೆ ಸರಿಸುಮಾರು 8 ಕಿಲೋ.ಮೀಟರ್ ಅಂತರವಿದೆ.

ಕನ್ನಡಮಾತೆಯಾದ ಭುವನೇಶ್ವರ ತಾಯಿಯ  ದೇವಾಲಯವನ್ನು ನೀವು ಸಿದ್ದಾಪುರದಲ್ಲಿ ಕಣ್ತುಂಬಿಸಿಕೊಳ್ಳಬಹುದು.

ಈ ದೇಗುಲವು 300 ಅಡಿ ಎತ್ತರದ ಭುವನಗಿರಿ ಬೆಟ್ಟದ ಮೇಲೆ ನೆಲೆಗೊಂಡಿದೆ.

ಈ ದೇವಾಲಯವು ಬೆಂಗಳೂರಿನಿಂದ ಸುಮಾರು 450 ಕಿಲೋ ಮೀಟರ್​​​ ದೂರದಲ್ಲಿದೆ.

ಇಲ್ಲಿ ಗಣಪತಿ,ಗೋಪಾಲ ಕೃಷ್ಣ,ನಂದೀಕೇಶ್ವರ ಮತ್ತು ನಾಗರದೇವತೆಗಳ ದೇವಾಲಯಗಳು ಕೂಡ ಇದೆ.