ಬಯೋಟಿನ್ ಗಳು ನಿಮ್ಮ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.

ಬಯೋಟಿನ್ ಗಳು ದೇಹದಲ್ಲಿ ನಿಮ್ಮ ಸಕ್ಕರೆಯ ಮಟ್ಟವನ್ನು ಸಮಸ್ಥಿತಿಯಲ್ಲಿಡುತ್ತದೆ.

ಕಣ್ಣು, ಕೂದಲು, ಚರ್ಮ ಮತ್ತು ಮೆದುಳಿನ ಕಾರ್ಯಕ್ಕೆ ಬಯೋಟಿನ್ ಮುಖ್ಯವಾಗಿದೆ.

ಬಯೋಟಿನ್ ನಿಮ್ಮ ಉಗುರಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.

ಬಯೋಟಿನ್ ಅತ್ಯಗತ್ಯ ಸೂಕ್ಷ್ಮ ಪೋಷಕಾಂಶವಾಗಿದ್ದು, ವಿಟಮಿನ್ ಬಿ 7ನ್ನು ಎಂದೂ ಕರೆಯುತ್ತಾರೆ.

ಇದು ನಿಮ್ಮ ದೇಹದಲ್ಲಿನ ಚಯಾಪಚಯ ಕ್ರಿಯೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಆದ್ದರಿಂದ ವಿಟಮಿನ್ ಬಿ 7 ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.