ಪೊಗರು ಚಿತ್ರದಲ್ಲಿ ನಟಿಸಿದ್ದ ಬಾಡಿ ಬಿಲ್ಡರ್ 30ನೇ ವಯಸ್ಸಿಗೆ ನಿಧನ

ಧ್ರುವ ಸರ್ಜಾ ಜೊತೆಗೆ ಪೊಗರು ಸಿನಿಮಾದಲ್ಲಿ ಅಬ್ಬರಿಸಿದ್ದ ಬಾಡಿ ಬಿಲ್ಡರ್ ಜೋ ಲಿಂಡ್ನರ್.

ಕೇವಲ 30ನೇ ವಯಸ್ಸಿಗೆ ಇಹಲೋಹ ತ್ಯಜಿಸಿದ್ದು, ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ.

ಮೂಲತಃ ಜರ್ಮನ್​​​ನಲ್ಲಿರುವ​​ ಲಿಂಡ್ನರ್ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಫೇಮಸ್​​ ಆಗಿದ್ದರು.

ತನ್ನ ಫಿಟ್ನೆಸ್​​ ಮೂಲಕವೇ ಸೋಶಿಯಲ್​ ಮೀಡಿಯಾಗಳಲ್ಲಿ ಮಿಲಿಯನ್​​​ ಫಾಲೋವರ್ಸ್​ಗಳನ್ನು ಪಡೆದುಕೊಂಡಿದ್ದರು.

ಕೆಲವು ದಿನಗಳ ಹಿಂದೆಯಷ್ಟೇ ಕುತ್ತಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪ್ರತೆಗೆ ದಾಖಲಿಸಲಾಗಿತ್ತು.

ಇದೀಗಾ ಸಾವಿನ ಸುದ್ದಿಯನ್ನು ಲಿಂಡ್ನರ್​​​ನ ಗೆಳತಿ ನಿಚಾ ಖಚಿತ ಪಡಿಸಿದ್ದಾರೆ.

ಆ್ಯನ್ಯುರಿಸಮ್​​ ಎಂಬ ರಕ್ತನಾಳದ ಕಾಯಿಲೆಯಿಂದಾಗಿ ಬಳಲುತ್ತಿದ್ದ ಜೋ ಲಿಂಡ್ನರ್.

ಬಾಡಿಬಿಲ್ಡಿಂಗ್‌ ಲೋಕದ ಲೆಜೆಂಡ್‌ನ್ನು ಕಳೆದುಕೊಂಡಿದ್ದೇವೆ ಎಂದು ಅಭಿಮಾನಿಗಳು ಸೋಶಿಯಲ್​ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ.