ಆರೋಗ್ಯಕರ ಹಾಗೂ ಸದೃಢ ಮೂಳೆಗಳಿಗಾಗಿ ಈ ಟಿಪ್ಸ್ ಫಾಲೋ ಮಾಡಿ

ನಿಮ್ಮ ಮೂಳೆಗಳನ್ನು ಸದೃಢವಾಗಿ ಮಾಡುವಲ್ಲಿ ಕ್ಯಾಲ್ಸಿಯಂಗಳು ಅತ್ಯಂತ ಅಗತ್ಯವಾಗಿರುತ್ತದೆ. ಆದ್ದರಿಂದ ಕ್ಯಾಲ್ಸಿಯಂಗಳು ಸಮೃದ್ಧವಾಗಿರುವ ಡೈರಿ ಉತ್ಪನ್ನ, ಸೊಪ್ಪು ತರಕಾರಿ ಸೇವಿಸುವುದು ಅಗತ್ಯ.

ದೇಹವು ಕ್ಯಾಲ್ಸಿಯಂಗಳನ್ನು ಸರಿಯಾಗಿ ಹೀರಿಕೊಳ್ಳಲು ಮಿಟಮಿನ್ ಡಿ ಅವಶ್ಯಕವಾಗಿದೆ. ಸೂರ್ಯನ ಕಿರಣ ಮಿಟಮಿನ್ ಡಿಯ ನೈಸರ್ಗಿಕ ಮೂಲವಾಗಿದೆ.

ವೇಟ್ ಲಿಫ್ಟಿಂಗ್, ಜಾಗಿಂಗ್ ಅಥವಾ ಟೆನ್ನಿಸ್ ನಂತಹ ನಿಮ್ಮ ಮೂಳೆಗಳ ಮೆಲೆ ಒತ್ತಡವುಂಟು ಮಾಡುವ ವ್ಯಾಯಾಮಗಳಲ್ಲಿ ತೊಡಗಿ. ಇದು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ.

ಧೂಮಪಾನವನ್ನು ತ್ಯಜಿಸಿ. ನೀವು ಧೂಮಪಾನ ಮಾಡುವುದರಿಂದ ನಿಮ್ಮ ಮೂಳೆಗಳು ದುರ್ಬಲಗೊಳ್ಳುತ್ತಾ ಹೋಗುತ್ತದೆ.

ಮದ್ಯಪಾನ ಮಿತಿಯಲ್ಲಿರಲಿ. ಅತಿಯಾದ ಮದ್ಯಪಾನವು ಕ್ಯಾಲ್ಸಿಯಂ ಹೀರಿಕೊಳ್ಳುವ ನಿಮ್ಮ ದೇಹದ ಸಾಮರ್ಥ್ಯ ಮೇಲೆ ಅಡಿಪಡಿಸುತ್ತದೆ. ಇದರಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತದೆ.

ಸಮತೋಲಿತ ಆಹಾರ ಸೇವಿಸಿ. ಸಾಕಷ್ಟು ಹಣ್ಣು, ಸೊಪ್ಪು ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಜೋಡಿಸಿ. ಇದು ನಿಮ್ಮ ಮೂಳೆಗಳನ್ನು ಆರೋಗ್ಯವಾಗಿಡುವಲ್ಲಿ ಸಹಾಯಕವಾಗಿದೆ.