22 August 2023

29ನೇ ಬ್ರೂನೆ ಸುಲ್ತಾನರ ಐಷಾರಾಮಿ ಜೀವನದ ಝಲಕ್

Author: Vijayasarathy SN

ಮಲೇಷ್ಯಾ ಪಕ್ಕದ ಪುಟ್ಟ ದೇಶ ಬ್ರೂನೆಯ ದೊರೆ ವಿಶ್ವದ ಅತಿಶ್ರೀಮಂತರಲ್ಲಿ ಒಬ್ಬರು. ಇವರದ್ದು ವಿಶ್ವದ ಅತಿದೊಡ್ಡ ಅರಮನೆ.

ಬ್ರೂನೆ ಸುಲ್ತಾನರ ಅರಮನೆ ಮೌಲ್ಯ 2,550 ಕೋಟಿ ರೂ; ಈ ಪ್ಯಾಲೇಸ್​ನಲ್ಲಿ 1,700 ಕೊಠಡಿಗಳು, 5 ಈಜುಕೊಳಗಳಿವೆ.

ಬ್ರೂನೆ ಸುಲ್ತಾನರ ಬಳಿ 7,000 ವಾಹನಗಳಿವೆ. 500 ರೋಲ್ಸ್ ರಾಯ್ಸ್, 300 ಫೆರಾರಿ ಕಾರುಗಳನ್ನು ಹೊಂದಿದ್ದಾರೆ. ಖಾಸಗಿ ಬೋಯಿಂಗ್ ವಿಮಾನ ಇದೆ.

ಹಸನಲ್ ಬೋಲ್ಕಿಯಾಹ್ ತಮ್ಮ ಖಾಸಗಿ ಬೋಯಿಂಗ್ 747 ವಿಮಾನದಲ್ಲಿ 3,000 ಕೋಟಿ ರೂ ಖರ್ಚು ಮಾಡಿ ಐಷಾರಾಮಿ ವ್ಯವಸ್ಥೆ ಮಾಡಿಸಿದ್ದಾರೆ.

ಬ್ರೂನೆ ಸುಲ್ತಾನರ ಅರಮನೆಯಲ್ಲಿ ಖಾಸಗಿ ಪ್ರಾಣಿ ಸಂಗ್ರಹಾಲಯ ಇದ್ದು ಅದರಲ್ಲಿ 30 ಬಂಗಾಳಿ ಹುಲಿಗಳಿವೆ.

ಸುಲ್ತಾನ್ ಹಸನಲ್ ಬೋಲ್ಕಿಯಾಹ್ ತಮ್ಮ ಚಹರೆಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ತಮ್ಮ ಹೈರ್ ಸ್ಟೈಲ್​ಗೆ 15 ಲಕ್ಷ ರುಪಾಯಿಗೂ ಹೆಚ್ಚು ವೆಚ್ಚ ಮಾಡುತ್ತಾರೆ.

ಹಸನಲ್ ಬೋಲ್ಕಿಯಾಹ್ 1967ರಿಂದ ಬ್ರೂನೇ ಸುಲ್ತಾನರಾಗಿದ್ದಾರೆ. 1962ರಲ್ಲಿ ಇವರನ್ನು ಬ್ರಿಟಿಷರ ಗೂರ್ಖಾ ಪಡೆಗಳು ದಂಗೆಯಿಂದ ರಕ್ಷಿಸಿದ್ದವು.

1984ರವರೆಗೂ ಬ್ರೂನೇ ದೇಶ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಸ್ವಾತಂತ್ರ್ಯದ ಬಳಿಕ ಹಸನಲ್ ಅವರು ಪ್ರಧಾನಿಯಾಗಿಯೂ ನಿರ್ವಹಿಸುತ್ತಿದ್ದಾರೆ.