ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಐದನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ.

ಈ ಹಿಂದಿನ ಬಜೆಟ್​ ಮಂಡನೆ ಸಂದರ್ಭ ಯಾವ ಬಣ್ಣದ ಸೀರೆಗಳಲ್ಲಿ ಸಂಸತ್​ಗೆ ಬಂದಿದ್ದರು ಎಂಬ ಮಾಹಿತಿ ಇಲ್ಲಿದೆ.

2019ರ ಬಜೆಟ್​ ವೇಳೆ ಕಡು ಪಿಂಕ್, ಗೋಲ್ಡ್ ಬಾರ್ಡರ್​​ನ ಮಂಗಲಗಿರಿ ಸೀರೆ ಉಟ್ಟಿದ್ದ ನಿರ್ಮಲಾ ಸೀತಾರಾಮನ್

2020ರ ಬಜೆಟ್ ಸಂದರ್ಭದಲ್ಲಿ ನೀಲಿ ಬಾರ್ಡರ್ ಉಳ್ಳ, ಹಳದಿ-ಚಿನ್ನದ ಬಣ್ಣದ ಸೀರೆ ಉಟ್ಟಿದ್ದರು.

2021ರ ಬಜೆಟ್​​ ಸಂದರ್ಭ ಕೆಂಪು ಮತ್ತು ಬಿಳಿ ಮಿಶ್ರಿತ ಬಣ್ಣದ ಪೋಚಂಪಳ್ಳಿ ಸೀರೆ ಉಟ್ಟು ಗಮನ ಸೆಳೆದಿದ್ದರು.

2022ರ ಬಜೆಟ್ ವೇಳೆ ಕೈಮಗ್ಗ ನೇಯ್ಗೆಯ ಸೀರೆ ಉಟ್ಟು ಸಂಸತ್​ಗೆ ಬಂದಿದ್ದರು.

ಈ ಬಾರಿ (2023) ಕಪ್ಪು ಬಾರ್ಡರ್​ನ ಕೆಂಪು ಬಣ್ಣದ ಸೀರೆಯೊಂದಿಗೆ ಬಜೆಟ್​ ಮಂಡನೆಗೆ ಆಗಮಿಸಿದ್ದಾರೆ.