13 Nov 2024
Pic: Getty images
Vijayasarathy SN
Pic: Getty images
ನೀವು ಒಮ್ಮೆಗೆ ಹಲವು ಕ್ರೆಡಿಟ್ ಕಾರ್ಡ್ಗಳು ಅಥವಾ ಸಾಲಗಳಿಗೆ ಅರ್ಜಿ ಸಲ್ಲಿಸಬೇಡಿ. ನೀವು ಅಗತ್ಯಕ್ಕಿಂತ ಹೆಚ್ಚು ಸಾಲ ಮಾಡುವ ಸಾಧ್ಯತೆ ಇರಬಹುದು ಎಂದು ಬ್ಯಾಂಕುಗಳು ಗ್ರಹಿಸಬಹುದು. ಅರ್ಜಿ ಸಲ್ಲಿಕೆಗಳ ಮಧ್ಯೆ ಸಮಯ ಅಂತರ ಇರಲಿ.
Pic: Getty images
ನೀವು ಬ್ಯಾಂಕ್ನಿಂದ ಸಾಲ ಪಡೆದಿದ್ದರೆ ನಿಗದಿತ ದಿನದೊಳಗೆ ಇಎಂಐ ಪಾವತಿಸುವುದನ್ನು ಮರೆಯದಿರಿ. ಇಲ್ಲದಿದ್ದರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗಬಹುದು. ಜೊತೆಗೆ ಲೇಟ್ ಪೇಮೆಂಟ್ ಫೀ ಕೂಡ ಇರುತ್ತದೆ.
Pic: Getty images
ಸಾಲದ ಇಎಂಐನಂತೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯೂ ಬಹಳ ಮುಖ್ಯ. ನಿಗದಿತ ದಿನದೊಳಗೆ ನೀವು ಬಿಲ್ ಪಾವತಿಸುವುದನ್ನು ಮರೆಯದಿರಿ. ತಡವಾಗಿ ಪಾವತಿಸಿದರೆ ದಂಡ ಹಾಕಲಾಗುತ್ತದೆ. ಕ್ರೆಡಿಟ್ ಸ್ಕೋರ್ ಬೀಳುತ್ತದೆ.
Pic: Getty images
ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ನಲ್ಲಿ ಮಿನಿಮಮ್ ಅಮೌಂಟ್ ಕಾಣಬಹುದು. ಒಟ್ಟು ಬಿಲ್ ಮೊತ್ತದಲ್ಲಿ ಇದು ಶೇ. 5ರಷ್ಟಿರುತ್ತದೆ. ಇಷ್ಟನ್ನು ಮಾತ್ರ ನೀವು ಕಟ್ಟಿದರೆ ಉಳಿದ ಬಾಕಿ ಹಣಕ್ಕೆ ದುಬಾರಿ ಫೈನಾನ್ಸ್ ಚಾರ್ಜ್ ಹಾಕಲಾಗುತ್ತದೆ.
Pic: Getty images
ಸಿಬಿಲ್ ಇತ್ಯಾದಿ ಕೆಲ ಸಂಸ್ಥೆಗಳು ನಿಮಗೆ ಕ್ರೆಡಿಟ್ ಸ್ಕೋರ್ ಮಾಹಿತಿ ನೀಡುತ್ತವೆ. ಆಗಾಗ್ಗೆ ನೀವು ಪರಿಶೀಲಿಸಬಹುದು. ಯಾವುದಾದರೂ ವ್ಯತಿರಿಕ್ತ ಅಂಶ ಕಂಡು ಬಂದರೆ ಬ್ಯಾಂಕ್ ಅನ್ನು ಸಂಪರ್ಕಿಸಿ ಮನವಿ ಮಾಡಬಹುದು.
Pic: Getty images
ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ ಕಡೆ ಗಮನ ಇರಲಿ. ನಿಮ್ಮ ಕ್ರೆಡಿಟ್ ಲಿಮಿಟ್ನ ಶೇ. 30ಕ್ಕಿಂತ ಹೆಚ್ಚು ಮೊತ್ತ ಬಳಕೆಯಾದರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗಬಹುದು. ಅಗತ್ಯಬಿದ್ದರೆ ಹೆಚ್ಚುವರಿ ಕ್ರೆಡಿಟ್ ಕಾರ್ಡ್ ಪಡೆಯಬಹುದು.
Pic: Getty images
ಬೇರೆಯವರ ಸಾಲಕ್ಕೆ ನೀವು ಶೂರಿಟಿ ಹಾಕುವ ಮುನ್ನ ಯೋಚಿಸಿ. ಬ್ಯಾಂಕುಗಳು ನಿಮ್ಮನ್ನೂ ಸಾಲಗಾರನೆಂದೇ ಪರಿಗಣಿಸುತ್ತವೆ. ಆ ಸಾಲ ತೀರಲಿಲ್ಲವೆಂದರೆ ನೀವೂ ಹೊಣೆಗಾರರಾಗುತ್ತೀರಿ. ನಿಮ್ಮಿಂದಲೇ ಸಾಲ ವಸೂಲಿ ಮಾಡಬಹುದು.