11 Sep 2024
Pic credit: Google
Vijayasarathy SN
ಭವಿಷ್ಯದಲ್ಲಿ ನಿಮ್ಮ ಹಣಕಾಸು ಗುರಿಗಳೇನು ಎಂದು ಪಟ್ಟಿ ಮಾಡಿಕೊಳ್ಳಿ. ನಿವೃತ್ತಿಗೆ ಮತ್ತು ತುರ್ತು ನಿಧಿಗೆ ಹಣ ಎತ್ತಿಡುವುದು ಬಹಳ ಅಗತ್ಯ. ವರ್ಷದಿಂದ ವರ್ಷಕ್ಕೆ ಹಣದ ಮೌಲ್ಯ ಕಡಿಮೆ ಆಗುವುದು ನಿಮ್ಮ ಗಮನದಲ್ಲಿರಲಿ.
Pic credit: Google
ಒಂದು ತಿಂಗಳಲ್ಲಿ ಯಾವುದಕ್ಕೆಲ್ಲಾ ಎಷ್ಟೆಲ್ಲಾ ಖರ್ಚಾಗುತ್ತೆ ಎಂದು ನಿಖರ ಪಟ್ಟಿ ಮಾಡಿಕೊಳ್ಳಿ. ಯಾವುದರಿಂದ ಉಳಿಸಬಹುದು, ಎಷ್ಟು ಖರ್ಚು ಮಾಡಬೇಕು ಎಂದು ಬಜೆಟ್ ಹಾಕಿ, ಅದನ್ನು ಚಾಚೂ ತಪ್ಪದೇ ಪಾಲಿಸಿ.
Pic credit: Google
ನೀವು ಉಳಿಸಿದ ಪ್ರತೀ ಹಣವೂ ಗಳಿಕೆಗೆ ಸಮ ಎನ್ನುವುದನ್ನು ಯಾವತ್ತೂ ಮರೆಯಬೇಡಿ. ತೀರಾ ಅಗತ್ಯವಾಗಿದ್ದಕ್ಕೆ ಮಾತ್ರ ಖರ್ಚು ಮಾಡಿ. ಎಷ್ಟು ಸಾಧ್ಯವಾಗುತ್ತೋ ಅಷ್ಟು ಉಳಿಸುವುದು ನಿಮ್ಮ ಗುರಿಯಾಗಬೇಕು.
Pic credit: Google
ನೀವು ಉಳಿಸುವ ಸಣ್ಣ ಹಣವೂ ಮುಖ್ಯವೇ. ಇವ್ಯಾವುದನ್ನೂ ವ್ಯರ್ಥ ಮಾಡಬೇಡಿ. ಉಳಿತಾಯದ ಹಣ ಇಡಲೆಂದೇ ಪ್ರತ್ಯೇಕ ಖಾತೆ ಇಡುವುದು ಉತ್ತಮ. ಯಾವುದೇ ಸೇವಿಂಗ್ಸ್ ಹಣವನ್ನು ಆ ಖಾತೆಗೆ ವರ್ಗಾಯಿಸಿ.
Pic credit: Google
ಗಳಿಸು, ಉಳಿಸು, ಹೂಡು ಈ ಮೂರು ಕಾರ್ಯಗಳು ಹಣಕಾಸು ಸ್ವಾತಂತ್ರ್ಯಕ್ಕೆ ಮೂಲ ಅಂಶಗಳು. ಹಣ ಗಳಿಸದೇ ಇದ್ದರೆ ಕೊನೆಯ ಎರಡು ಸಾಧ್ಯವೇ ಇಲ್ಲ. ನಿಮ್ಮ ಶಕ್ತಿ, ಯುಕ್ತ್ಯಾನುಸಾರ ಗರಿಷ್ಠ ಗಳಿಕೆಗೆ ಗಮನ ಕೊಡಿ. ಒಂದಕ್ಕಿಂತ ಹೆಚ್ಚು ಆದಾಯ ಮೂಲ ಸೃಷ್ಟಿಸಿ.
Pic credit: Google
ಜ್ಞಾನಾರ್ಜನೆ ಯಾವತ್ತಿಗೂ ಕೂಡ ಒಳ್ಳೆಯದು. ನೀವು ವಿದ್ಯಾರ್ಥಿಯಾಗಿರಲಿ, ವೃತ್ತಿಯಲ್ಲಿರಲಿ ನಿರಂತರ ಕಲಿಕೆ ಇಲ್ಲದೇ ಇದ್ದರೆ ಔಟ್ಡೇಟೆಡ್ ಆಗಬಹುದು. ಕಲಿಕೆಯಿಂದ ನಿಮಗೆ ಹೊಸ ಆಲೋಚನೆ ಸಿಗುತ್ತದೆ. ಸಂಪಾದನೆಗೆ ಹೊಸ ಮಾರ್ಗ ಸಿಗಬಹುದು.
Pic credit: Google
ಸಾಲವೆಂಬುದು ಶೂಲ ಹೌದು. ಆದರೆ ಸಾಲವನ್ನೂ ಕೂಡ ನಿಮ್ಮ ಹಣಕಾಸು ಸ್ವಾತಂತ್ರ್ಯದ ಕೈಂಕರ್ಯಕ್ಕೆ ಬಳಸಿಕೊಳ್ಳಬಹುದು. ಸಾಲದ ಸಮರ್ಪಕ ನಿರ್ವಹಣೆಯ ಕೌಶಲ್ಯ ನಿಮಗೆ ತಿಳಿದಿರಬೇಕು.
Pic credit: Google