ಇಸ್ರೇಲ್ ಹಮಾಸ್ ಯುದ್ಧದ ಪರಿಣಾಮ, ಚಿನ್ನ ಎಷ್ಟರವರೆಗೆ ಏರಬಹುದು?

By: Vijayasarathy SN

09 Oct 2023

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ನಡೆಯುತ್ತಿರುವಂತೆಯೇ ತೈಲ ಬೆಲೆಗಳು ಹೆಚ್ಚಿವೆ. ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚತೊಡಗಿವೆ.

ಯುದ್ಧದ ಎಫೆಕ್ಟ್

Pic Credit: Google

ಎರಡು ವಾರದಿಂದ ಬಹುತೇಕ ಇಳಿಮುಖದಲ್ಲಿದ್ದ ಚಿನ್ನದ ಬೆಲೆ ಇದೀಗ ಇಸ್ರೇಲ್ ಯುದ್ಧ ಶುರುವಾದಾಗಿನಿಂದ ದಿಕ್ಕು ಬದಲಾಯಿಸಿ ಏರತೊಡಗಿದೆ.

ಚಿನ್ನಕ್ಕೆ ಬೇಡಿಕೆ

Pic Credit: Google

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1 ಟ್ರಾಯ್ ಔನ್ಸ್​ಗೆ 1,849 ಯುಎಸ್​ಡಿ ಇದೆ. 1 ಟ್ರಾಯ್ ಔನ್ಸ್ ಎಂದರೆ 31.1034768 ಗ್ರಾಂ.

ಎಷ್ಟಿದೆ ಬೆಲೆ?

Pic Credit: Google

ರೂಪಾಯಿ ಲೆಕ್ಕದಲ್ಲಿ 24 ಕ್ಯಾರಟ್​ನ 10 ಗ್ರಾಂ ಚಿನ್ನಕ್ಕೆ 49,483 ರೂ ಆಗುತ್ತದೆ. ಭಾರತದಲ್ಲಿ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 58,200 ರೂ ಇದೆ.

ಭಾರತದಲ್ಲಿ ಎಷ್ಟಿದೆ?

Pic Credit: Google

ಇಸ್ರೇಲ್-ಹಮಾಸ್ ಯುದ್ಧದಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿ ಹಣದುಬ್ಬರ ಹೆಚ್ಚಬಹುದು. ಡಾಲರ್ ವೃದ್ಧಿಸಿ, ರುಪಾಯಿ ಕುಸಿಯಬಹುದು.

ಯುದ್ಧ ಪರಿಣಾಮವೇನು?

Pic Credit: Google

ಅನಿಶ್ಚಿತ ಸ್ಥಿತಿ ಎದುರಾಗುವ ಹಿನ್ನೆಲೆಯಲ್ಲಿ ಜಾಗತಿಕವಾಗಿ ಚಿನ್ನ ಹೆಚ್ಚು ಸುರಕ್ಷಿತ ಹೂಡಿಕೆ ಎನಿಸಬಹುದು. ಹೀಗಾದರೆ, ಚಿನ್ನಕ್ಕೆ ಬೇಡಿಕೆ ಹೆಚುತ್ತದೆ.

ಸುರಕ್ಷಿತ ಹೂಡಿಕೆ

Pic Credit: Google

ಭಾರತದಲ್ಲಿ ಹಬ್ಬದ ಸೀಸನ್ ಇರುವುದರಿಂದ ಚಿನ್ನಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಿರುತ್ತದೆ. ಇದರಿಂದ ಹಳದಿ ಲೋಹದ ಬೆಲೆ ಭಾರತದಲ್ಲಿ ಹೆಚ್ಚುತ್ತದೆ.

ಹಬ್ಬದ ಸೀಸನ್

Pic Credit: Google

ಅಮೆರಿಕದಲ್ಲಿ ಬಡ್ಡಿದರ ಇಳಿಯುವ ಸಾಧ್ಯತೆ ಇಲ್ಲ. ಬಾಂಡ್ ಯೀಲ್ಡ್ ಹೆಚ್ಚುವುದರಿಂದ ಚಿನ್ನದ ಮೇಲಿನ ಹೂಡಿಕೆ ತೀರಾ ಹೆಚ್ಚಿನ ಮಟ್ಟಕ್ಕೆ ಹೋಗಲ್ಲ.

ತೀರಾ ಹೆಚ್ಚಲ್ಲ...

Pic Credit: Google

ತಜ್ಞರ ಪ್ರಕಾರ, 1 ಔನ್ಸ್ ಚಿನ್ನದ ಬೆಲೆ 1,880ರಿಂದ 1,900 ಡಾಲರ್ ತಲುಪಬಹುದು. ಭಾರತದಲ್ಲಿ 10 ಗ್ರಾಂ ಶುದ್ಧಚಿನ್ನದ ಬೆಲೆ 63,000 ರೂವರೆಗೂ ಹೋಗಬಹುದು.

ಎಷ್ಟಾಗಬಹುದು ಬೆಲೆ?

Pic Credit: Google

Next Story: 'ಜನ ನನ್ನನ್ನು ಮದುವೆ ಬ್ರೋಕರ್ ರೀತಿ ನೋಡ್ತಿದ್ದಾರೆ'