ಲಡಾಖ್​ನಲ್ಲಿ ‘ಅನ್ಯ ಗ್ರಹ’ ಸೃಷ್ಟಿ; ಭಾರತದ ಮೊದಲ ಪ್ರಯೋಗ

03 Nov 2024

Pic: AAKA, Isro

Vijayasarathy SN

ಬಾಹ್ಯಾಕಾಶ ಕ್ಷೇತ್ರದಲ್ಲಿ ದಿನೇ ದಿನೇ ಗಟ್ಟಿ ಹೆಜ್ಜೆಗಳನ್ನು ಇರಿಸುತ್ತಿರುವ ಭಾರತ ಇದೀಗ ಹೊಸ ಸಾಧನೆಗೆ ಕೈಹಾಕಿದೆ. ಲಡಾಖ್​ನಲ್ಲಿ ಕೃತಕವಾಗಿ ‘ಮಂಗಳ’ ಗ್ರಹ ಸೃಷ್ಟಿಸಲಾಗಿದೆ. ಇದು ಭಾರತದ ಮೊದಲ ಅನಲಾಗ್ ಸ್ಪೇಸ್ ಮಿಷನ್.

Pic: AAKA, Isro

ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಮರ್ಥ್ಯ ಗಳಿಸಲು ಭಾರತಕ್ಕೆ ಈ ಅನಲಾಗ್ ಸ್ಪೇಸ್ ಮಿಷನ್ ಬಹಳ ಉಪಯುಕ್ತ. ಅನ್ಯಗ್ರಹಗಳಲ್ಲಿ ಮನುಷ್ಯನಿಗೆ ಎದುರಾಗಬಹುದಾದ ವಾಸ್ತವಿಕ ಸವಾಲುಗಳನ್ನು ಎದುರಿಸಲು ನೆರವಾಗುತ್ತದೆ.

Pic: AAKA, Isro

ಲಡಾಖ್​ನ ಲೇಹ್​ನಲ್ಲಿ ಇದಕ್ಕಾಗಿ ಅನಲಾಗ್ ಸ್ಪೇಸ್ ಸೆಂಟರ್ ಸಜ್ಜಾಗಿದೆ. ಇಸ್ರೋದ ಹ್ಯೂಮನ್ ಸ್ಪೇಸ್​ಫ್ಲೈಟ್ ಸೆಂಟ್, ಎಎಕೆಎ ಸ್ಪೇಸ್ ಸ್ಟುಡಿಯೋ, ಲಡಾಖ್ ಯೂನಿವರ್ಸಿಟಿ ಮತ್ತು ಐಐಟಿ ಬಾಂಬೆ ಇವುಗಳು ಈ ಯೋಜನೆಗೆ ಕೈಜೋಡಿಸಿವೆ.

Pic: AAKA, Isro

ಲಡಾಖ್​ನಲ್ಲಿರುವ ಗುಡ್ಡಗಾಡುಗಳು ಮಂಗಳ ಮತ್ತು ಚಂದ್ರನ ಮೇಲ್ಮೈನ ರಚನೆಗಳಿಗೆ ಹೋಲುತ್ತವೆ. ಲಡಾಖ್​ನಲ್ಲಿನ ಎತ್ತರ ಪ್ರದೇಶ, ಚಳಿ, ಶುಷ್ಕತೆಯ (ತೇವಾಂಶ ಇಲ್ಲದ್ದು) ವಾತಾವರಣವು ಸ್ಪೇಷನ್ ಮಿಷನ್ ಪರೀಕ್ಷೆಗೆ ಹೇಳಿಮಾಡಿಸಿದ್ದಾಗಿದೆಯಂತೆ.

Pic: AAKA, Isro

ಗಗನಯಾನ ಯೋಜನೆ ಅಡಿ ಭಾರತವು ಮನುಷ್ಯನನ್ನು ಚಂದ್ರನಲ್ಲಿ ಕಳುಹಿಸುವ ಪ್ಲಾನ್ ಹಾಕಿದೆ. ಈ ಮಿಷನ್​ಗೆ ಸಿದ್ಧತೆ ಸಾಕಷ್ಟು ಅಗತ್ಯ. ಲಡಾಖ್​ನಲ್ಲಿರುವ ಅನಲಾಗ್ ಮಿಷನ್ ನೆರವಾಗಲಿದೆ.

Pic: AAKA, Isro

ಸುದೀರ್ಘ ಬಾಹ್ಯಾಕಾಶ ಪ್ರವಾಸದ ವೇಳೆ ಸಂಪನ್ಮೂಲ ನಿರ್ವಹಣೆ, ಮಾನಸಿಕ ಸಮಸ್ಯೆ ಇತ್ಯಾದಿ ಸವಾಲುಗಳನ್ನು ಗಗನಯಾತ್ರಿಗಳು ಅನಲಾಗ್ ಸ್ಪೇಸ್ ಮಿಷನ್​ನಲ್ಲೇ ಪೂರ್ವಭಾವಿಯಾಗಿ ಎದುರಿಸಿ, ಸಿದ್ಧಗೊಳ್ಳಬಹುದು.

Pic: AAKA, Isro

ಗುಜರಾತ್ ಮೂಲದ ಎಎಕೆಎ ಸ್ಪೇಸ್ ಸ್ಟುಡಿಯೋ ವಿವಿಧ ರೀತಿಯ ಕೃತಕ ವಾತಾವರಣಗಳ ವಾಸಸ್ಥಳವನ್ನು ವಿನ್ಯಾಸ ಮಾಡುವುದರಲ್ಲಿ ಪರಿಣಿತಿ ಹೊಂದಿದೆ. ಈ ಮಿಷನ್​ಗೆ ಇದರ ಕೊಡುಗೆ ಗಮನಾರ್ಹ.

Pic: AAKA, Isro