14 Aug 2024

ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆಗೆ ಮುನ್ನ ಇವು ತಿಳಿದಿರಿ

Pic credit: Getty

Vijayasarathy SN

ಗುರಿ ಏನು?

Pic credit: Getty

ಯಾವುದೇ ಹೂಡಿಕೆ ಮಾಡುವ ಮುನ್ನ ಗುರಿಗಳೇನು ಎಂದು ಮೊದಲು ಕಂಡುಕೊಳ್ಳಿ. ಶಾಲೆ ಫೀಸು, ತುರ್ತು ವೆಚ್ಚ, ವಾಹನ ಖರೀದಿ, ಮನೆ ಖರೀದಿ, ರಿಟೈರ್ಮೆಂಟ್ ಪ್ಲಾನ್ ಇತ್ಯಾದಿ ಪಟ್ಟಿ ಮಾಡಿಕೊಂಡು ಮುಂದುವರಿಯಿರಿ.

ವೈವಿಧ್ಯತೆ ಇರಲಿ

Pic credit: Getty

ನಿಮ್ಮ ಹೂಡಿಕೆ ಒಂದೇ ಕಡೆ ಇರಬಾರದು. ನೇರ ಈಕ್ವಿಟಿಗಳಲ್ಲಿ ಹಾಕಬಹುದು. ಮ್ಯೂಚುವಲ್ ಫಂಡ್, ಚಿನ್ನ, ಬೆಳ್ಳಿ, ಎಫ್​ಡಿ, ಪಿಪಿಎಫ್ ಇತ್ಯಾದಿ ಹರಡಿರಲಿ.

ಮ್ಯೂಚುವಲ್ ಫಂಡ್

Pic credit: Getty

ಮ್ಯೂಚುವಲ್ ಫಂಡ್​ನಲ್ಲಿ ನಿಮ್ಮ ಹೆಚ್ಚಿನ ಹೂಡಿಕೆಗಳಿರಲಿ ಆದರೆ, ಅಲ್ಲಿಯೂ ಕೂಡ ಈಕ್ವಿಟಿ, ಡೆಟ್ ಮತ್ತಿತರ ರೀತಿಯ ಮ್ಯುಚುವಲ್ ಫಂಡ್​ಗಳಲ್ಲಿ ನಿಮ್ಮ ಹೂಡಿಕೆ ಹರಡಿರಲಿ.

ಥೀಮ್ಯಾಟಿಕ್ ಹುಷಾರ್

Pic credit: Getty

ದೀರ್ಘಾವಧಿಗೆ ನೀವು ಹೂಡಿಕೆ ಮಾಡುವುದಾದರೆ ಯಾವುದೇ ವಲಯಕ್ಕೆ ನಿರ್ದಿಷ್ಟವಾದ ಥೀಮ್ಯಾಟಿಕ್ ಫಂಡ್ ಆರಿಸಿಕೊಳ್ಳಬೇಡಿ. ಇವು ಕೆಲ ವರ್ಷ ಮಿಂಚಿ ಮಂದಗೊಳ್ಳಬಹುದು.

ದೀರ್ಘಾವಧಿಗೆ ಇದು ಸರಿ

Pic credit: Getty

ದೀರ್ಘಾವಧಿ ಹೂಡಿಕೆಗೆ ನೀವು ಹೈಬ್ರಿಡ್ ಫಂಡ್, ಇಂಡೆಕ್ಸ್ ಫಂಡ್, ಫ್ಲೆಕ್ಸಿ ಕ್ಯಾಪ್ ಫಂಡ್ ಇತ್ಯಾದಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ಪರಿಸ್ಥಿತಿಗೆ ಅನುಗುಣವಾಗಿ ಫಂಡ್ ಮ್ಯಾನೇಜರ್​ಗಳು ಹೂಡಿಕೆ ಬದಲಿಸುತ್ತಿರುತ್ತಾರೆ.

ಎಸ್​ಐಪಿ ಯೋಚಿಸಿ

Pic credit: Getty

ನಿಮ್ಮ ಸಂಬಳದಲ್ಲಿ ನಿರ್ದಿಷ್ಟ ಭಾಗವನ್ನು ಹೂಡಿಕೆಗೆ ಎತ್ತಿಡಬಲ್ಲಿರಾದರೆ ಮ್ಯೂಚುವಲ್ ಫಂಡ್​ಗಳಲ್ಲಿ ಎಸ್​ಐಪಿ ಆರಂಭಿಸಬಹುದು. ಇದರಿಂದ ನಿಯಮಿತವಾಗಿ ಹೂಡಿಕೆ ಸಾಧ್ಯವಾಗುತ್ತದೆ.

ರೀಸರ್ಚ್ ಮಾಡಿ

Pic credit: Getty

ಮ್ಯೂಚುವಲ್ ಫಂಡ್​ನ ಎಕ್ಸ್​ಪೆನ್ಸ್ ರೇಶಿಯೋ, ಹಿಂದಿನ ರಿಟರ್ನ್ಸ್, ಫಂಡ್ ಮ್ಯಾನೇಜರ್​ನ ಅನುಭವ, ಫಂಡ್ ನಿರ್ವಹಿಸುವ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ (ಎಎಂಸಿ) ಇವೆಲ್ಲವನ್ನೂ ಅವಲೋಕಿಸಿ ಬಳಿಕ ನಿರ್ಧಾರ ಮಾಡಿ.