ಕಾರ್ಪೊರೇಟ್ ಅಲ್ಲದ ಸಣ್ಣ ಉದ್ದಿಮೆಗಳು ಮತ್ತು ಎಂಎಸ್ಎಂಇಗಳಿಗೆ ಬೆಂಬಲ ನೀಡುವ ಗುರಿಯೊಂದಿಗೆ 2015ರಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿತು.
ಉದ್ಯೋಗಸೃಷ್ಟಿಗೆ ಅಗತ್ಯ
Pic credit: Google
ಉದ್ಯಮಶೀಲತೆ ಉತ್ತೇಜಿಸಲು ಮತ್ತು ದೇಶಾದ್ಯಂತ ಉದ್ಯೋಗ ಹೆಚ್ಚಿಸಲು ಪುಷ್ಟಿ ನೀಡುವ ಈ ಯೋಜನೆಯನ್ನು ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಅಂಡ್ ರೀಫೈನಾನ್ಸ್ ಏಜೆನ್ಸಿ (MUDRA) ನಿರ್ವಹಿಸುತ್ತದೆ.
ಸಣ್ಣ ಉದ್ದಿಮೆಗಳು...
Pic credit: Google
ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಮತ್ತು ಮೀನು ಸಾಕಾಣಿಕೆ, ಕರಕುಶಲ ವಸ್ತು ತಯಾರಿಕೆ ಇತ್ಯಾದಿ ಸಣ್ಣ ಪುಟ್ಟ ಉದ್ದಿಮೆಗಳಲ್ಲಿ ತೊಡಗಿರುವವರು ಈ ಮುದ್ರಾ ಸಾಲ ಪಡೆಯಬಹುದು.
ಮೂರು ರೀತಿಯ ಸಾಲ
Pic credit: Google
ಮುದ್ರಾ ಯೋಜನೆ ಅಡಿ ಮೂರು ವಿಧದ ಸಾಲ ನೀಡಲಾಗುತ್ತದೆ. ಶಿಶು ಸಾಲ, ಕಿಶೋರ ಸಾಲ ಮತ್ತು ತರುಣ ಸಾಲ ಎಂದು ವಿಭಾಗಿಸಲಾಗಿದೆ.
20 ಲಕ್ಷ ರೂವರೆಗೆ ಸಾಲ
Pic credit: Google
ಶಿಶು ಸಾಲ ವಿಭಾಗದಲ್ಲಿ 50,000 ರೂವರೆಗೆ ಸಾಲ ಸಿಗುತ್ತದೆ. ಕಿಶೋರ ವಿಭಾಗದಲ್ಲಿ 5 ಲಕ್ಷ ರೂವರೆಗೆ ಸಾಲದ ಅವಕಾಶ ಇದೆ. ತರುಣ ವಿಭಾಗದಲ್ಲಿ 20 ಲಕ್ಷ ರೂವರೆಗೆ ಸಾಲ ಪಡೆಯಬಹುದು.
ಬ್ಯಾಂಕುಗಳಲ್ಲಿ ಸಾಲ
Pic credit: Google
ಯೋಜನೆಯಡಿ ಸಾಲ ಪಡೆಯಲು ಇಚ್ಚಿಸುವ ಅರ್ಹ ಅರ್ಜಿದಾರರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಸ್ಥಳೀಯ ಬ್ಯಾಂಕುಗಳನ್ನು ಸಂಪರ್ಕಿಸಬಹುದು.
ಸರಿಯಾದ ದಾಖಲೆಗಳು
Pic credit: Google
ಕೆವೈಸಿ ದಾಖಲೆಗಳು, ಹೊಸ ಬಿಸಿನೆಸ್ ಆದರೆ ಅದರ ಪ್ರಾಜೆಕ್ಟ್ ವಿವರ, ಜೊತೆಗೆ ಆ ವ್ಯಾಪಾರದಿಂದ ಆದಾಯ ಪಡೆಯುವುದು ಹೇಗೆ ಎನ್ನುವ ಅಂದಾಜು, ಇವಿಷ್ಟೂ ಇದ್ದರೆ ಸಾಲ ಸುಲಭ.