ಆರ್​ಬಿಐ ಹಣಕಾಸು ನೀತಿ ಸಮಿತಿಯ ಪ್ರಮುಖ ನಿರ್ಧಾರಗಳು

06 Oct 2023

Story by Vijayasarathy SN

ಆರ್​ಬಿಐ ರೆಪೋದರವನ್ನು (ಬಡ್ಡಿದರ) ಶೇ. 6.5ರಲ್ಲಿ ಮುಂದುವರಿಸಿದೆ. ರಿವರ್ಸ್ ರಿಪೋ, ಎಸ್​ಡಿಎಫ್, ಎಂಎಸ್​ಎಫ್ ದರ ಕೂಡ ಯಥಾಸ್ಥಿತಿಯಲ್ಲಿರಲಿವೆ.

ರೆಪೋ ದರ

Pic credit: Google

2023-24ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 5.4ರಲ್ಲಿರಬಹುದು ಎಂದು ಆರ್​ಬಿಐ ಅಂದಾಜಿಸಿದೆ. ನಿರೀಕ್ಷಿತ ರೀತಿಯಲ್ಲಿ ಹಣದುಬ್ಬರ ಇಳಿಕೆ ಆಗುವುದಿಲ್ಲ.

ಹಣದುಬ್ಬರ

Pic credit: Google

2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.5ರಷ್ಟು ವೃದ್ಧಿಸಬಹುದು ಎಂಬ ತನ್ನ ಅಂದಾಜನ್ನು ಆರ್​ಬಿಐ ಪುನರುಚ್ಚರಿಸಿದೆ. ಬ್ಯಾಂಕಿಂಗ್ ವಲಯ ಬಲಿಷ್ಠವಾಗಿದೆ.

ಜಿಡಿಪಿ

Pic credit: Google

ನಗರ ಸಹಕಾರಿ ಬ್ಯಾಂಕುಗಳಲ್ಲಿ ಬುಲೆಟ್ ರೀಪೇಮೆಂಟ್ ಸ್ಕೀಮ್ ಅಡಿಯಲ್ಲಿ ನೀಡಲಾಗುವ ಚಿನ್ನದ ಸಾಲದ ಮಿತಿಯನ್ನು 4 ಲಕ್ಷ ರುಗೆ ಹೆಚ್ಚಿಸಲಾಗುತ್ತಿದೆ.

ಗೋಲ್ಡ್ ಲೋನ್

Pic credit: Google

ಪಾವತಿ ಸ್ವೀಕೃತಿ ಸಾಧನಗಳ ಅಳವಡಿಕೆಗೆ ಉತ್ತೇಜಿಸಲು ರೂಪಿಸಲಾದ ಪಿಐಡಿಎಫ್ ಸ್ಕೀಮ್ ಅನ್ನು ಎರಡು ವರ್ಷ ವಿಸ್ತರಿಸಲಾಗಿದೆ. 2025ರ ಅಂತ್ಯದವರೆಗೂ ಇದು ಇರಲಿದೆ.

ಪಿಐಡಿಎಫ್

Pic credit: Google

ಪಿಐಡಿಎಫ್ ಸ್ಕೀಮ್ ವ್ಯಾಪ್ತಿಗೆ ಪಿಎಂ ವಿಶ್ವಕರ್ಮ ಯೋಜನೆಯ ಫಲಾನುಭವಿಗಳನ್ನು ತರಲಾಗಿದೆ. ಬಡಗಿ ಮೊದಲಾದ ಕುಶಲಕರ್ಮಿಗಳಿಗೆ ಈ ಸಾಧನಕ್ಕೆ ಸಬ್ಸಿಡಿ ಸಿಗುತ್ತದೆ.

ಪಿಎಂ ವಿಶ್ವಕರ್ಮ

Pic credit: Google

ಹಣಕಾಸು ಹರಿವು ಹಿಂಪಡೆಯುವಿಕೆಯ (Withdrawal of Accommodation) ನಿಲುವನ್ನು ಆರ್​ಬಿಐ ಮುಂದುವರಿಸಿದೆ. ಹಣದುಬ್ಬರ ನಿಯಂತ್ರಣಕ್ಕೆ ಇದು ಸಹಕಾರಿ.

ಹಣದ ಹರಿವು

Pic credit: Google

ಚಲಾವಣೆಯಿಂದ ಹಿಂಪಡೆಯಲಾಗಿರುವ 3.56 ಲಕ್ಷ ಕೋಟಿ ರೂ ಮೌಲ್ಯದ 2,000 ರೂ ನೋಟುಗಳ ಪೈಕಿ ಶೇ. 87ರಷ್ಟು ನೋಟುಗಳು ಆರ್​ಬಿಐಗೆ ಮರಳಿವೆ ಎಂದು ತಿಳಿಸಲಾಗಿದೆ.

2,000 ರೂ ನೋಟು

Pic credit: Google

Next Story: 'ಗಜರಾಮ' ಚಿತ್ರದ ಸ್ಪೆಷಲ್ ಸಾಂಗ್​ನಲ್ಲಿ ತುಪ್ಪದ ಬೆಡಗಿ