By: Vijayasarathy SN

ಬಜೆಟ್ 2024:  ಚಿನ್ನದ ಉದ್ಯಮ ನಿರೀಕ್ಷೆಗಳು ಏನು?

23 Jan 2024

ಭಾರತದ ಹರಳು ಮತ್ತು ಆಭರಣ ಉದ್ಯಮವು ಚಿನ್ನ, ವಜ್ರ, ಬೆಳ್ಳಿ, ಹರಳುಕಲ್ಲುಗಳ ಆಮದಿನ ಮೇಲೆ ಅವಲಂಬಿತವಾಗಿದೆ.

ಅವಲಂಬನೆ

(Pic credit: Google)

ಚಿನ್ನ, ಕಟ್ ಡೈಮಂಡ್, ಪಾಲಿಶ್ ಡೈಮಂಡ್ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವಂತೆ ಆಭರಣ ರಫ್ತು ಪ್ರಚಾರ ಮಂಡಳಿ (ಜಿಜೆಇಪಿಸಿ) ಒತ್ತಾಯಿಸಿದೆ.

ಸುಂಕ ಕಡಿಮೆ ಮಾಡಿ

(Pic credit: Google)

ಚಿನ್ನ, ಹರಳು, ಬೆಳ್ಳಿಯಂತಹ ಅಮೂಲ್ಯ ಲೋಹಗಳಿಗೆ ಶೇ. 15ರಷ್ಟು ಆಮದು ಸುಂಕ ಇದೆ. ಇದನ್ನು 4 ಪ್ರತಿಶತಕ್ಕೆ ಇಳಿಸಬೇಕೆಂದು ಆಗ್ರಹಿಸಲಾಗಿದೆ.

ಶೇ. 4ಕ್ಕೆ ಇಳಿಸಿ

(Pic credit: Google)

ಕಟ್ ಡೈಮಂಡ್ ಮತ್ತು ಪಾಲಿಶ್ಡ್ ಡೈಮಂಡ್​ಗಳಿಗೆ ಇರುವ ಕಸ್ಟಮ್ಸ್ ಡ್ಯೂಟಿಯನ್ನು ಶೇ. 5ರಿಂದ 2.5ಕ್ಕೆ ಇಳಿಸಬೇಕೆಂದು ಕೇಳಲಾಗಿದೆ.

ಕಸ್ಟಮ್ಸ್ ಡ್ಯೂಟಿ

(Pic credit: Google)

ಹೊರದೇಶಗಳಿಂದ ಚಿನ್ನ, ಬೆಳ್ಳಿ, ಹರಳು ಇತ್ಯಾದಿ ಲೋಹಗಳನ್ನು ಆಮದು ಮಾಡಿ, ಅದರಿಂದ ವಿವಿಧ ಆಭರಣಗಳನ್ನು ತಯಾರಿಸಿ ರಫ್ತು ಮಾಡಲಾಗುತ್ತದೆ.

ಉದ್ಯಮ ಹೀಗಿದೆ

(Pic credit: Google)

ಹೆಚ್ಚಿನ ಆಮದು ಸುಂಕಗಳಿದ್ದರೆ ರಫ್ತು ಪ್ರಮಾಣ ಕಡಿಮೆ ಆಗುತ್ತದೆ. ಆಭರಣ ಉದ್ಯಮದಿಂದ ಉದ್ಯೋಗ ಸೃಷ್ಟಿ ಕಡಿಮೆ ಆಗುತ್ತದೆ.

ಉದ್ಯಮಕ್ಕೆ ಕಷ್ಟ

(Pic credit: Google)

ಭಾರತದ ಆಭರಣ ಉದ್ಯಮವು ಚೀನಾ ಮತ್ತು ಥಾಯ್ಲೆಂಡ್ ದೇಶಗಳಿಂದ ತೀವ್ರ ಪೈಪೋಟಿ ಎದುರಿಸುತ್ತದೆ. ಆಮದು ಸುಂಕ ಹೆಚ್ಚಿದ್ದರೆ ಪರಿಸ್ಥಿತಿ ಇನ್ನೂ ಕಷ್ಟವಾಗುತ್ತದೆ.

ಪೈಪೋಟಿ ಕಷ್ಟ

(Pic credit: Google)

ಸ್ಪೆಷಲ್ ನೋಟಿಫೈಡ್ ಝೋನ್​ಗಳ ಮೂಲಕ ವ್ಯವಹರಿಸಲು ಅನುಮತಿ ಇರುವ ಸಂಸ್ಥೆಗಳ ಪಟ್ಟಿಗೆ ಇನ್ನಷ್ಟು ಸೇರ್ಪಡೆ ಮಾಡಬೇಕು ಎಂದು ಆಭರಣ ಉದ್ಯಮ ಕೇಳಿದೆ.

ಸಂಸ್ಥೆ ಹೆಚ್ಚಿಸಿ

(Pic credit: Google)