ULIP ಅಥವಾ ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ ಎಂಬುದು ಜೀವ ವಿಮೆ ಮತ್ತು ಹೂಡಿಕೆ ಎರಡನ್ನೂ ಒಳಗೊಂಡಿರುವ ಹೈಬ್ರಿಡ್ ಯೋಜನೆ. ಬಹಳ ಫ್ಲೆಕ್ಸಿಬಲ್ ಇರುವಂತಹ ಪ್ಲಾನ್ ಇದು.
ಹೈಬ್ರಿಡ್ ಯೋಜನೆ
Pic credit: Getty
ಯುಲಿಪ್ನಲ್ಲಿ ನೀವು ಕಟ್ಟುವ ಪ್ರೀಮಿಯಮ್ ಎರಡು ಭಾಗಗಳಾಗುತ್ತವೆ. ಒಂದು ಭಾಗವು ಲೈಫ್ ಕವರ್ಗೆ ಹೋಗುತ್ತದೆ. ಮತ್ತೊಂದು ಭಾಗವು ನಿಮ್ಮ ಆಯ್ಕೆಯ ಫಂಡ್ಗಳಲ್ಲಿ ಹೂಡಿಕೆ ಆಗುತ್ತದೆ. ಎರಡೂ ಕೂಡ ನಿಮ್ಮ ನಿಯಂತ್ರಣದಲ್ಲೇ ಇರುತ್ತವೆ.
ಎರಡು ಭಾಗ
Pic credit: Getty
ಎಷ್ಟು ಪ್ರೀಮಿಯಮ್ ಮೊತ್ತ ಲೈಫ್ ಇನ್ಷೂರೆನ್ಸ್ ಕವರ್ಗೆ ಹೋಗಬೇಕು ಎಂಬುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು. ನಿಮ್ಮ ವಾರ್ಷಿಕ ಪ್ರೀಮಿಯಮ್ನ ಕನಿಷ್ಠ ಹತ್ತು ಪಟ್ಟು ಮೊತ್ತವಾದರೂ ಲೈಫ್ ಕವರ್ಗೆ ಹೋಗಬೇಕು. ಗರಿಷ್ಠ ಮಿತಿ 40 ಪಟ್ಟು ಇರುತ್ತದೆ.
ಲೈಫ್ ಕವರ್ ಎಷ್ಟು?
Pic credit: Getty
ಪ್ರೀಮಿಯಮ್ನ ಎರಡನೇ ಭಾಗದ ಹಣ ಫಂಡ್ಗೆ ಹೂಡಿಕೆ ಆಗುತ್ತದೆ. ಇದರಲ್ಲಿ ಮೂರು ಆಯ್ಕೆ ಇವೆ. ಒಂದು, ಈಕ್ವಿಟಿ. ಮತ್ತೊಂದು ಡೆಟ್ ಫಂಡ್. ಮೂರನೆಯದು ಈಕ್ವಿಟಿ ಮತ್ತು ಡೆಟ್ ಎರಡೂ ಫಂಡ್ನಲ್ಲಿ ಹೂಡಿಕೆ.
ಹೂಡಿಕೆ ಆಯ್ಕೆ
Pic credit: Getty
ನೀವು ರಿಸ್ಕ್ ತೆಗೆದುಕೊಳ್ಳುವುದಾದರೆ ಈಕ್ವಿಟಿ ಫಂಡ್ ಆಯ್ಕೆ ಮಾಡಬಹುದು. ಮಾರುಕಟ್ಟೆ ಕುಸಿಯುತ್ತಿದೆ ಎಂದಾದಲ್ಲಿ ಡೆಟ್ ಫಂಡ್ಗೆ ಬದಲಾಗಬಹುದು. ಈ ರೀತಿ ಹೂಡಿಕೆ ಯಂತ್ರ ಬದಲಿಸುವ ಆಯ್ಕೆ ನಿಮ್ಮಲ್ಲೇ ಇರುತ್ತದೆ.
ಹೂಡಿಕೆಯಲ್ಲೂ ಫ್ಲೆಕ್ಸಿಬಿಲಿಟಿ
Pic credit: Getty
ಯುಲಿಪ್ನಲ್ಲಿ ಮತ್ತೊಂದು ಒಳ್ಳೆಯ ಫೀಚರ್ ಎಂದರೆ ಹೂಡಿಕೆ ಅವಧಿಯಲ್ಲಿ ಮಧ್ಯದಲ್ಲಿ ಒಂದಷ್ಟು ಭಾಗವನ್ನು ಹಿಂಪಡೆಯುವ ಅವಕಾಶ ಇರುತ್ತದೆ. ತುರ್ತು ಸಂದರ್ಭ ಬಂದಾಗ ನೀವು ಸ್ವಲ್ಪ ಹಣ ವಿತ್ಡ್ರಾ ಮಾಡಬಹುದು.
ಮಧ್ಯದಲ್ಲಿ ವಿತ್ಡ್ರಾ
Pic credit: Getty
ಯುನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ನಲ್ಲಿ ನೀವು ಕಟ್ಟುವ ಪ್ರೀಮಿಯಮ್ ಹಣಕ್ಕೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಅನುಕೂಲ ಇರುತ್ತದೆ. ಒಟ್ಟಾರೆ ಯುಲಿಪ್ ಬಹು ಅನುಕೂಲ ಒದಗಿಸುವ ವಿಮೆ ಕಮ್ ಹೂಡಿಕೆ.