ವಿವೇಕ್ ಮನೆ ಯಲ್ಲಿ ದಾದಿ  ಕೆಲಸ; ಸಂಬಳ  80 ಲಕ್ಷ ರೂ

Pic Credit: Google

04 Oct 2023

ಭಾರತ ಮೂಲದ ವಿವೇಕ್ ರಾಮಸ್ವಾಮಿ ಅಮೆರಿಕದ ರಿಪಬ್ಲಿಕನ್ ಪಕ್ಷದಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ. ಮೂಲತಃ ಉದ್ಯಮಿ.

ಭಾವೀ ಅಧ್ಯಕ್ಷರು

Pic Credit: Google

38 ವರ್ಷದ ವಿವೇಕ್ ರಾಮಸ್ವಾಮಿ ಪತ್ನಿ ಹೆಸರು ಅಪೂರ್ವಾ; ಇಬ್ಬರಿಗೂ ಇಬ್ಬರು ಗಂಡುಮಕ್ಕಳಿದ್ದಾರೆ. ವಯಸ್ಸು 1 ಮತ್ತು 4 ವರ್ಷ.

ವಿವೇಕ್ ಕುಟುಂಬ

Pic Credit: Google

ವಿವೇಕ್ ರಾಮಸ್ವಾಮಿ ತಮ್ಮ ಮಕ್ಕಳನ್ನು ಪಾಲನೆ ಮಾಡಲು ಒಬ್ಬ ದಾದಿಯ ಹುಡುಕಾಟದಲ್ಲಿದ್ದಾರೆ. ಜಾಹೀರಾತು ಕೂಡ ನೀಡಿದ್ದಾರೆ.

ದಾದಿ ಬೇಕಾಗಿದ್ದಾರೆ

Pic Credit: Google

ಹೈಪ್ರೊಫೈಲ್ ಕುಟುಂಬದೊಂದಿಗೆ ಕೆಲಸ ಮಾಡುವ ಅಪೂರ್ವ ಅವಕಾಶ. ಅವರ ಮಕ್ಕಳ ಏಳ್ಗೆಗೆ ನೆರವಾಗಬಹುದು ಎಂದಿದೆ ಜಾಹೀರಾತು.

ಜಾಹೀರಾತು ಹೀಗೆ

Pic Credit: Google

ಮಕ್ಕಳನ್ನು ಪಾಲನೆ ಮಾಡುವ ದಾದಿ ಕೆಲಸಕ್ಕೆ ಸೇರಬಯಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಇರಬೇಕು. ಅನುಭವವೂ ಇರಬೇಕು.

ಕೆಲಸಕ್ಕೆ ಅರ್ಹತೆ

Pic Credit: Google

ವಿವೇಕ್ ರಾಮಸ್ವಾಮಿ ಮನೆಯಲ್ಲಿ ಈಗಾಗಲೇ ದಾದಿಯರ ತಂಡ ಸೇರಿದಂತೆ ಹೌಸಿಂಗ್ ಸಿಬ್ಬಂದಿ ಇದ್ದಾರೆ. ಅವರ ಜೊತೆ ಸಮನ್ವಯತೆ ಹೊಂದಿರಬೇಕು.

ಹೌಸಿಂಗ್ ಸ್ಟಾಫ್

Pic Credit: Google

ವರ್ಷಕ್ಕೆ 26 ವಾರ ಕೆಲಸ ಇರುತ್ತದೆ. ಒಂದು ವಾರ ಕೆಲಸ ಮಾಡಿದರೆ ಇನ್ನೊಂದು ವಾರ ರಜೆ. ಸಂಬಳ ವರ್ಷಕ್ಕೆ 1 ಲಕ್ಷ ಡಾಲರ್ (83,00,000 ರೂ).

ಸಂಬಳ ಎಷ್ಟು?

Pic Credit: Google

ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು, ನಿತ್ಯದ ಕ್ರಮಗಳನ್ನು ಗಮನಿಸುವುದು, ಪ್ರಯಾಣದಲ್ಲಿ ಜೊತೆಗಿರುವುದು ಇತ್ಯಾದಿ ಜವಾಬ್ದಾರಿ ಇರುತ್ತದೆ.

ಕೆಲಸ ಏನು?

Pic Credit: Google

Next Story: ನಿತ್ಯ ಪಠಿಸಲೇಬೇಕಾದ ಮಂತ್ರಗಳಿವು