ಸಂಬಳಕ್ಕೆ  50-30-20  ಸೂತ್ರ

09 Sep 2024

Pic credit: Getty

Vijayasarathy SN

ನೀವೇ ಜವಾಬ್ದಾರರು

Pic credit: Getty

ನಿಮಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಸಂಬಳವೇ ಪ್ರಮುಖ ಆದಾಯ ಮೂಲವಾಗಿದ್ದರೆ ನಿವೃತ್ತಿ ಬಳಿಕ ಪಿಂಚಣಿ ಇತ್ಯಾದಿ ಜೀವನ ಭದ್ರತೆಗೆ ನೀವೇ ಜವಾಬ್ದಾರರಾಗಿರುತ್ತೀರಿ.

ಕಷ್ಟವಾಗುತ್ತಿದೆಯೇ?

Pic credit: Getty

ಬಹಳಷ್ಟು ಜನರು ತಮ್ಮ ಸಂಬಳ ಪೂರ್ತಿ ಹಣಕ್ಕೆ ಕಮಿಟ್ ಆಗುವುದುಂಟು. ಬಾಡಿಗೆ, ಚೀಟಿ, ಇಎಂಐ, ಕ್ರೆಡಿಟ್ ಕಾರ್ಡ್ ಇತ್ಯಾದಿಗೆ ಖರ್ಚಾಗಿ ಹೋಗುತ್ತದೆ. ಹಣ ಉಳಿಸಲು ಸಾಧ್ಯವೇ ಆಗುವುದಿಲ್ಲ ಎನ್ನುವಂತಿರುತ್ತದೆ.

50:30:20 ಸೂತ್ರ

Pic credit: Getty

ಸಂಬಳ ಇತ್ಯಾದಿ ನಿಮ್ಮ ಎಲ್ಲಾ ಆದಾಯದಲ್ಲಿ ಅಗತ್ಯಗಳಿಗೆ ಎಷ್ಟು ಬೇಕು, ಆಸೆಗಳಿಗೆ ಎಷ್ಟು ಖರ್ಚು ಮಾಡಬೇಕು. ಉಳಿತಾಯ ಎಷ್ಟಾಗಬೇಕು ಎನ್ನುವುದೇ 50:30:20 ಸೂತ್ರ. ವೆಚ್ಚ ಮತ್ತು ಉಳಿತಾಯದ ಬಗ್ಗೆ ಗೊಂದಲ ಇದ್ದರೆ ಈ ಸೂತ್ರ ಬೆಸ್ಟ್.

ಶೇ. 50ರಷ್ಟು ಆದಾಯ

Pic credit: Getty

ಮನೆ ಬಾಡಿಗೆ, ಇಎಂಐ, ದಿನಸಿ ವಸ್ತು, ವಿದ್ಯುತ್, ನೀರು, ಮೊಬೈಲ್, ಇಂಟರ್ನೆಟ್ ಬಿಲ್​ಗಳು, ಸಾರಿಗೆ, ಆರೋಗ್ಯ ಇತ್ಯಾದಿ ಅತ್ಯವಶ್ಯಕ ವೆಚ್ಚಗಳಿಗೆ ಶೇ. 50ರಷ್ಟು ಆದಾಯ ಮೀಸಲಿಡಿ.

ಶೇ. 30 ಏನು?

Pic credit: Getty

ಇದು ಬಯಕೆ ಅಥವಾ ನಮ್ಮ ಅಭಿಲಾಷೆ ತೀರಿಸಲು ಮೀಸಲಿರಿಸಬಹುದಾದ ಹಣ. ಉದಾಹರಣೆಗೆ, ಹೋಟೆಲ್ ಊಟ, ಸಿನಿಮಾ, ಬಟ್ಟೆಬರೆಗಳು, ಗ್ಯಾಜೆಟ್, ವಾಹನ ಇತ್ಯಾದಿ ವೆಚ್ಚಗಳು.

ಶೇ. 20 ಸೇವಿಂಗ್ಸ್

Pic credit: Getty

ಇದು ಬಹಳ ಮುಖ್ಯ. ನಿಮ್ಮ ಒಟ್ಟಾರೆ ಆದಾಯದಲ್ಲಿ ಕನಿಷ್ಠ ಎಂದರೂ ಶೇ. 20ರಷ್ಟಾದರೂ ಹಣವನ್ನು ಉಳಿಸಿ ಅದನ್ನು ಹೂಡಿಕೆಗೆ ಹಾಕಬೇಕು. ಷೇರು, ಮ್ಯೂಚುವಲ್ ಫಂಡ್, ಠೇವಣಿ, ಇತ್ಯಾದಿಯಲ್ಲಿ ಇನ್ವೆಸ್ಟ್ ಮಾಡಬಹುದು.

ಉಳಿತಾಯಕ್ಕೆ ಆದ್ಯತೆ

Pic credit: Getty

ಇಲ್ಲಿ ನಿಮ್ಮ ವೆಚ್ಚಗಳನ್ನು ಎಷ್ಟು ಸಾಧ್ಯವೋ ಅಷ್ಟು ಉಳಿಸಲು ಪ್ರಯತ್ನಿಸಿ. ಸಾಲ ಇದ್ದರೆ ಅದನ್ನು ತೀರಿಸಲು ಮೊದಲ ಆದ್ಯತೆ ಇರಲಿ. ಶೇ. 20ರಷ್ಟಿರುವ ಉಳಿತಾಯವನ್ನು ಶೇ. 40ಕ್ಕಿಂತಲೂ ಹೆಚ್ಚು ಮಾಡಲು ಯತ್ನಿಸಿ.