ತಪ್ಪಾಗಿ ಯುಪಿಐ ಪೇಮೆಂಟ್ ಮಾಡಿಬಿಟ್ಟಿರಾ? ಹಿಂಪಡೆಯುವುದು ಹೇಗೆ?

26 Oct 2023

By: Vijayasarathy SN

ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಭಾರತದ ಅತ್ಯಂತ ಸಾಮಾನ್ಯ ಡಿಜಿಟಲ್ ಪೇಮೆಂಟ್ ಸರ್ವಿಸ್ ಆಗಿದೆ. ಬಹಳ ಸರಳವೂ ಆದ್ದರಿಂದ ಹೆಚ್ಚಿನ ಬಳಕೆಯಲ್ಲಿದೆ.

ಸಾಮಾನ್ಯ ಬಳಕೆ

Pic credit: Google

ಬ್ಯಾಂಕ್ ಖಾತೆ ಸಂಖ್ಯೆ, ಐಎಫ್​ಎಸ್​ಸಿ ಕೋಡ್ ರಗಳೆ ಇಲ್ಲದೇ ಮೊಬೈಲ್ ನಂಬರ್, ವಿಪಿಎ ಅಥವಾ ಕ್ಯುಆರ್ ಕೋಡ್​ನಿಂದ ಹಣ ಪಾವತಿಸಲು ಅನುವು ಮಾಡಿಕೊಡುತ್ತದೆ.

ಸುಲಭ ಬಳಕೆ

Pic credit: Google

ಭೀಮ್, ಪೇಟಿಎಂ, ಫೋನ್ ಪೇ, ಗೂಗಲ್ ಪೇ, ವಾಟ್ಸಾಪ್, ಅಮೇಜಾನ್ ಪೇ ಇತ್ಯಾದಿ ವಿವಿಧ ಆ್ಯಪ್​ಗಳು ಯುಪಿಐ ಪೇಮೆಂಟ್​ಗೆ ಪ್ಲಾಟ್​ಫಾರ್ಮ್ ಒದಗಿಸುತ್ತವೆ.

ಯುಪಿಐ ಆ್ಯಪ್​

Pic credit: Google

ಯುಪಿಐ ಮೂಲಕ ಯಾರಿಗಾದರೂ ಹಣ ಕಳುಹಿಸುವಾಗ ಕೆಲವೊಮ್ಮೆ ತಪ್ಪಾಗಿ ಕಳುಹಿಸಬಹುದು. ಹೀಗಾದಾಗ ಏನು ಮಾಡಬೇಕು? ಮುಂದಿದೆ ವಿವರ...

ತಪ್ಪಾಗಿ ಕಳಿಸಿದಾಗ

Pic credit: Google

ನೀವು ತಪ್ಪಾಗಿ ಯಾರಿಗಾದರೂ ಹಣ ಕಳುಹಿಸಿದ್ದರೆ ಅವರನ್ನು ಸಂಪರ್ಕಿಸಿ ಪರಿಸ್ಥಿತಿ ವಿವರಿಸಿ. ಹಣ ಹಿಂದಿರುಗಿಸುವಂತೆ ವಿನಮ್ರ ಮನವಿ ಮಾಡಿ. ಜಬರದಸ್ತು ಬೇಡ.

ಆಯ್ಕೆ 1

Pic credit: Google

ನಿಮ್ಮ ಯುಪಿಐ ಸರ್ವಿಸ್ ಪ್ರೊವೈಡರ್​ನ ಕಸ್ಟಮರ್ ಕೇರ್ ಸಪೋರ್ಟ್ ಟೀಮ್​ಗೆ ಕೂಡಲೇ ಮಾಹಿತಿ ನೀಡಿ. ಪೇಮೆಂಟ್​ನ ಸ್ಕ್ರೀನ್​ಶಾಟ್ ಇತ್ಯಾದಿ ದಾಖಲೆ ಒದಗಿಸಿ.

ಆಯ್ಕೆ 2

Pic credit: Google

ಯುಪಿಐ ಆ್ಯಪ್​ನಲ್ಲಿ ನಿಮ್ಮ ಮನವಿಗೆ ಸ್ಪಂದನೆ ಸಿಗದೇ ಹೋದಲ್ಲಿ ಅಥವಾ ನಿಮಗೆ ಸಮಾಧಾನ ತರದೇ ಇದ್ದಲ್ಲಿ ಎನ್​ಪಿಸಿಐ ಪೋರ್ಟಲ್​ನಲ್ಲಿ ದೂರು ದಾಖಲಿಸಿ.

ಆಯ್ಕೆ 3

Pic credit: Google

ನಿಮ್ಮ ಹಣ ಸ್ವೀಕರಿಸಿದ ವ್ಯಕ್ತಿಯ ಸಂಪರ್ಕ ಸಾಧ್ಯವಾಗದೇ ಹೋದಾಗ ನೀವು ಬ್ಯಾಂಕ್​ನ ಕಸ್ಟಮರ್ ಕೇರ್ ಹೆಲ್ಪ್​ಲೈನ್ ಅಥವಾ ಬ್ಯಾಂಕ್ ಕಚೇರಿ ಸಂಪರ್ಕಿಸಬಹುದು.

ಆಯ್ಕೆ 4

Pic credit: Google

Next Story: ಹಿಂಡನ್ಬರ್ಗ್ ವರದಿ ಬಳಿಕ ಅದಾನಿ ಷೇರುಗಳ ಸ್ಥಿತಿ ಹೇಗಿದೆ?

ಧನ್ಯವಾದಗಳು