ಟಾಲಿವುಡ್ ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗೆ ತಮ್ಮ ಬೇಸಿಗೆಯ ಔಟ್ ಫಿಟ್ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಬೇಸಿಗೆಯಲ್ಲಿ ಮೈಯೆಲ್ಲಾ ಬೆವರಿನಿಂದ ಕೂಡಿರುವುದರಿಂದ ಆರಾಮದಾಯಕ ಬಟ್ಟೆ ಧರಿಸುವುದು ಅಗತ್ಯವಾಗಿರುತ್ತದೆ.

ನಟಿ ಕಾಜಲ್ ಧರಿಸಿರುವ ಈ ಪ್ರಿಂಟೆಡ್ ಡ್ರೆಸ್​​​​​ ಸಾಕಷ್ಟು ಆರಾಮದಾಯಕವಾಗಿದ್ದು, ಬೇಸಿಗೆಯಲ್ಲಿ ಉತ್ತಮ ಆಯ್ಕೆಯಾಗಿದೆ.

ಈ ತಿಳಿ ಹಳದಿ ಬಣ್ಣದ ಬಟ್ಟೆ ಬೇಸಿಗೆಯಲ್ಲಿ ಉತ್ತಮ ಆಯ್ಕೆಯಾಗಿದೆ. ಆದರೆ ತಿಳಿ ಬಣ್ಣದ ಬಟ್ಟೆಗಳು ಬಿಸಿಲಿನ ಶಾಖವನ್ನು ಹೀರಿಕೊಳ್ಳುವುದಿಲ್ಲ.

ಚಿಕ್ ಜಂಪ್ಸೂಟ್ ನಟಿ ಕಾಜಲ್ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಬೇಸಿಗೆಯಲ್ಲಿ ಧರಿಸಲು ಸಾಕಷ್ಟು ಆರಾಮದಾಯಕವೂ ಹೌದು.

ಮಿನಿ ಡ್ರೆಸ್ ನ ಮೇಲೆ ನೀಳ ತೋಳುಗಳುಲ್ಲ ಶರ್ಟ್ ಧರಿಸುವುದು ಈ ಬೇಸಿಗೆಯಲ್ಲಿ ಬಿಸಿಲಿನ ಶಾಖದಿಂದ ನಿಮ್ಮ ಚರ್ಮವನ್ನು ಕಾಪಾಡಿಕೊಳ್ಳಲು ಉತ್ತಮ ಆಯ್ಕೆಯಾಗಿದೆ.

ತಿಳಿ ಬಣ್ಣದ ತೆಳು ಸೀರೆಗಳು ಕೂಡ ಬೇಸಿಗೆಯಲ್ಲಿ ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ಅಂದವನ್ನು ಹೆಚ್ಚಿಸುವಲ್ಲಿಯೂ ಕೂಡ ಸಹಾಯಕವಾಗಿದೆ.