ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ

ನೀವು ವಾರಾಂತ್ಯದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳು ಇವು

ಬೆಂಗಳೂರು ಅರಮನೆ: ಈ ಭವ್ಯ ಅರಮನೆ ಸುಂದರ ವಾಸ್ತು ಶಿಲ್ಪಕ್ಕೆ ಹೆಸರುವಾಸಿಯಾಗಿದೆ.

ಇಸ್ಕಾನ್ ಟೆಂಪಲ್:  ಭವ್ಯವಾದ ಶ್ರೀ ಕೃಷ್ಣನ ದೇವಾಲಯದ ದರ್ಶನದ ಜೊತೆಗೆ ಕೃಷ್ಣನಿಗೆ ಪ್ರಿಯವಾದ ತಿಂಡಿಗಳನ್ನು ನೀವಿಲ್ಲಿ ಸವಿಯಬಹುದು.

ಲಾಲ್​​​ ಬಾಗ್​​: ಸುಮಾರು 240 ಎಕರೆ ಪ್ರದೇಶದ ಉದ್ಯಾನವನದಲ್ಲಿ ನೀವು ಸುಂದರ ಸಮಯವನ್ನು ಕಳೆಯಿರಿ. 

ಕಬ್ಬನ್​​ ಪಾರ್ಕ್​: ಸುಮಾರು 300 ಎಕರೆ ವಿಸ್ತೀರ್ಣದ ಸಾವಿರಾರು ದಟ್ಟ ಮರಗಳಿಂದ ಕೂಡಿದ ಸುಂದರ ಉದ್ಯಾನವನ

ಮಾಕಳಿ ದುರ್ಗವು ಬೆಂಗಳೂರಿನಿಂದ 60 ಕಿಮೀ ದೂರದಲ್ಲಿದ್ದು,ರಜಾದಿನಗಳಲ್ಲಿ ವಿಹಾರಕ್ಕೆ ಉತ್ತಮ ಟ್ರೆಕ್ಕಿಂಗ್ ತಾಣವಾಗಿದೆ.

ನಂದಿಬೆಟ್ಟ: ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟವನ್ನೊಮ್ಮೆ ಕಣ್ತುಂಬಿಸಿಕೊಳ್ಳಿ.

ಬೆಂಗಳೂರಿನಿಂದ ಸುಮಾರು 22 ಕಿ.ಮೀ ದೂರದಲ್ಲಿರುವ ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ.