ಟೊಮಾಟೋ ಸೇವನೆಯಿಂದಾಗುವ ಅಡ್ಡ ಪರಿಣಾಮಗಳು
ಟೊಮಾಟೋ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ಈಗಾಗಲೇ ತಿಳಿದಿರುವ ವಿಷಯ.
ಆದರೆ ಟೊಮಾಟೋದ ಅತಿಯಾದ ಸೇವನೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.
ಅತಿಸಾರ ಮತ್ತು ಮೂತ್ರಪಿಂಡದ ತೊಂದರೆಗಳು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಉಂಟು ಮಾಡುಬಹುದು.
ಟೊಮೆಟೋದಲ್ಲಿರುವ ಸೋಲನೈನ್ ಅಂಶ ಕೀಲುಗಳಲ್ಲಿ ಊತ ಹಾಗೂ ನೋವನ್ನುಂಟು ಮಾಡಬಹುದು.
ಟೊಮೆಟೋದಲ್ಲಿ ಅತಿಸಾರಕ್ಕೆ ಕಾರಣವಾಗುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಕಂಡುಬರುತ್ತದೆ.
ಕ್ಯಾಲ್ಸಿಯಂ ಹಾಗೂ ಆಕ್ಸಲೇಟ್ ಸಮೃದ್ಧವಾಗಿರುವ ಟೊಮೆಟೋ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.
ಟೊಮೆಟೋ ಹಿಸ್ಟಮೈನ್ ಸಂಯುಕ್ತವನ್ನು ಹೊಂದಿದ್ದು, ಇದು ಚರ್ಮದ ಅಲರ್ಜಿಗೆ ಕಾರಣವಾಗಬಹುದು.