ನಿಮ್ಮ ಅಡುಗೆ ಮನೆಯಲ್ಲಿನ ತ್ಯಾಜ್ಯಗಳನ್ನು ಗಿಡಗಳಿಗೆ ಗೊಬ್ಬರವಾಗಿ ಹಾಕಿ

ಗಾಜಿಯಾಬಾದ್​​​​ನ ಕೃಷಿತಜ್ಞರಾದ ಮಂಜುಶ್ರೀ ಲಾಡಿಯಾ ಮಿಶ್ರಗೊಬ್ಬರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಡುಗೆ ಮನೆಯಲ್ಲಿ ಬಳಸಿದ ತರಕಾರಿಗಳ ಸಿಪ್ಪೆಗಳನ್ನು ಸಂಗ್ರಹಿಸಿ ಅದನ್ನು ಗೊಬ್ಬರವಾಗಿ ಗಿಡಗಳಿಗೆ ಬಳಸಿ.

ಬಾಳೆಹಣ್ಣಿನಲ್ಲಿ ಪೊಟಾಷ್ಯಿಯಂ ಸಮೃದ್ಧವಾಗಿರುವುರಿಂದ ಇದರ ಸಿಪ್ಪೆಯೂ ಗಿಡಗಳ ಬೆಳವಣೆಗೆಗೆ ಉತ್ತಮ ಪೋಷಣೆಯನ್ನು ನೀಡುತ್ತದೆ.

ಮೂಸಂಬಿ ಮತ್ತು ಕಿತ್ತಳೆ ಹಣ್ಣುಗಳನ್ನು ತಿಂದ ನಂತರ ಅದರ ಸಿಪ್ಪೆಯನ್ನು  ಬಿಸಾಕುವ ಬದಲಾಗಿ ಗಿಡಗಳ ಬುಡಗಳಿಗೆ ಹಾಕಿ.

ಬೆಲ್ಲದ ನೀರು ಕೂಡ ನಿಮ್ಮ ಮನೆಯ ಗಿಡಗಳ ಪೋಷಣೆಗೆ ಸಹಾಯಕವಾಗಿದೆ ಎಂದು ಮಂಜುಳಾರವರು ಸಲಹೆ ನೀಡುತ್ತಾರೆ. 

ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸಿಪ್ಪೆಯನ್ನು ಕೂಡ ಬಿಸಾಕುವ ಬದಲಾಗಿ ಗಿಡಗಳಿಗೆ ಮಿಶ್ರಗೊಬ್ಬರವಾಗಿ ಬಳಸಿ.