19-01-2024

ಅಂಡರ್ 19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ನಾಯಕರಿವರು

Author: ಪೃಥ್ವಿ ಶಂಕರ

ಟೀಂ ಇಂಡಿಯಾ ಇದುವರೆಗೆ ಅಂಡರ್ 19 ವಿಶ್ವಕಪ್​ನಲ್ಲಿ ಐದು ಬಾರಿ ಚಾಂಪಿಯನ್ ಆಗಿದೆ.

ಮೊಹಮ್ಮದ್ ಕೈಫ್ ನಾಯಕತ್ವದಲ್ಲಿ ಭಾರತ 2000ರಲ್ಲಿ ಮೊಟ್ಟ ಮೊದಲ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದಿತ್ತು.

ಬಳಿಕ 2008 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಯುವ ಪಡೆ ಎರಡನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.

2012 ರಲ್ಲಿ ಭಾರತ ಮೂರನೇ ಬಾರಿಗೆ  ಅಂಡರ್-19 ವಿಶ್ವಕಪ್ ಗೆದ್ದಾಗ ಟೀಂ ಇಂಡಿಯಾದ ನಾಯಕತ್ವವನ್ನು ಉನ್ಮುಕ್ತ್ ಚಾಂದ್ ವಹಿಸಿದ್ದರು.

2018 ರಲ್ಲಿ ಟೀಂ ಇಂಡಿಯಾ ನಾಲ್ಕನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದಾತ ತಂಡದ ನಾಯಕತ್ವವನ್ನು ಪೃಥ್ವಿ ಶಾ ವಹಿಸಿದ್ದರು.

2022ರಲ್ಲಿ ಯಶ್‌ ಧುಲ್‌ ನಾಯಕತ್ವದಲ್ಲಿ ಭಾರತ ಕೊನೆಯ ಬಾರಿಗೆ ಅಂಡರ್‌-19 ವಿಶ್ವಕಪ್‌ ಗೆದ್ದಿತ್ತು.

NEXT: T20I ಪಂದ್ಯದಲ್ಲಿ ಬೌಂಡರಿಗಳಿಂದಲೇ ಹೆಚ್ಚು ರನ್ ಗಳಿಸಿದ ಭಾರತದ ಬ್ಯಾಟರ್ ಯಾರು ಗೊತ್ತಾ?