14-06-2024
ಕುಟುಂಬದ ವಿರೋಧ, ಬ್ಯಾಟ್ ಸುಟ್ಟಿದ್ದ ಅಣ್ಣ; ಇಂದು ಟಿ20 ವಿಶ್ವಕಪ್ ಹೀರೋ
2024ರ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ತನ್ನ ಪ್ರದರ್ಶನದ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ. ನ್ಯೂಜಿಲೆಂಡ್‌ನಂತಹ ಬಲಿಷ್ಠ ತಂಡವನ್ನು ಅಫ್ಘಾನ್ ಮಣಿಸಿದೆ.
ಅಫ್ಘಾನಿಸ್ತಾನದ ಈ ಅದ್ಭುತ ಪ್ರದರ್ಶನದಲ್ಲಿ ಬ್ಯಾಟ್‌ನೊಂದಿಗೆ ಪ್ರಮುಖ ಪಾತ್ರ ವಹಿಸಿದ ಒಬ್ಬ ಆಟಗಾರ ರಹಮಾನುಲ್ಲಾ ಗುರ್ಬಾಜ್.
ರಹಮಾನುಲ್ಲಾ ಗುರ್ಬಾಜ್ ಇಂದು ಅಫ್ಘಾನಿಸ್ತಾನ ಕ್ರಿಕೆಟ್‌ನ ಸ್ಟಾರ್ ಆಟಗಾರರಾಗಿದ್ದಾರೆ. ಆದರೆ ಗುರ್ಬಾಜ್ ಕ್ರಿಕೆಟ್ ಆಡಲು ಆರಂಭಿಸಿದಾಗ ಅವರು ಸಂದರ್ಭಗಳು ಇಷ್ಟು ಸುಲಭವಾಗಿರಲಿಲ್ಲ.
ಗುರ್ಬಾಜ್ ಅವರ ಕುಟುಂಬವೇ ಅವರು ಕ್ರಿಕೆಟ್ ಆಡುವುದನ್ನು ವಿರೋಧಿಸಿದ್ದರು. ಅವರ ಸಹೋದರ ಬ್ಯಾಟ್ ಅನ್ನು ಸುಟ್ಟು ಹಾಕಿದ್ದರು.
ಆದರೆ, ಇಷ್ಟೆಲ್ಲ ಆದರೂ ಕ್ರಿಕೆಟ್ ಆಡಬೇಕೆಂಬ ಹಠ ಬಿಡದ ಗುರ್ಬಾಜ್ ಇಂದು ಟಿ20 ವಿಶ್ವಕಪ್‌ನಲ್ಲಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ರಹಮಾನುಲ್ಲಾ ಗುರ್ಬಾಜ್ ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಆಡಿರುವ 3 ಇನ್ನಿಂಗ್ಸ್‌ಗಳಲ್ಲಿ 55.66 ಸರಾಸರಿಯಲ್ಲಿ 167 ರನ್ ಕಲೆಹಾಕಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.
ಅಫ್ಘಾನಿಸ್ತಾನ ತಂಡವನ್ನು ಪಂದ್ಯಾವಳಿಯ ಸೂಪರ್-8 ಗೆ ಕೊಂಡೊಯ್ಯುವಲ್ಲಿ ರಹಮಾನುಲ್ಲಾ ಅವರ ಬ್ಯಾಟಿಂಗ್ ಪ್ರಮುಖ ಪಾತ್ರ ವಹಿಸಿದೆ.
NEXT: ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಆಟಗಾರ ಯಾರು ಗೊತ್ತಾ?