23-06-2024

ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿದ ಅಫ್ಘಾನ್ ಕ್ರಿಕೆಟಿಗರ ಸಂಬಳ ಎಷ್ಟು ಗೊತ್ತಾ?

Author: ಪೃಥ್ವಿ ಶಂಕರ

ಇಂದು ನಡೆದ ಟಿ20 ವಿಶ್ವಕಪ್​ನ ಸೂಪರ್ 8 ಸುತ್ತಿನ ಹೈವೋಲ್ಟೇಜ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು  ಅಫ್ಘಾನಿಸ್ತಾನ ತಂಡ 21 ರನ್​ಗಳಿಂದ ಮಣಿಸಿದೆ.

ಇದರೊಂದಿಗೆ ಸೆಮಿಫೈನಲ್‌ಗೇರುವ ತನ್ನ ಕನಸನ್ನು ಅಫ್ಘಾನಿಸ್ತಾನ ತಂಡ ಇನ್ನು ಜೀವಂತವಾಗಿರಿಸಿಕೊಂಡಿದೆ. ಇತ್ತ ಆಸ್ಟ್ರೇಲಿಯಾ ತಂಡ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಇದೀಗ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಅಫ್ಘಾನಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಆದರೆ ಈ ತಂಡದ ಆಟಗಾರರು ಪಡೆಯುವ ಸಂಬಳ ಎಷ್ಟೆಂದು ಗೊತ್ತಾದರೆ ಎಲ್ಲರೂ ಅಚ್ಚರಿ ಪಡುತ್ತೀರಾ!

ಅಫ್ಘಾನಿಸ್ತಾನದ ಕ್ರಿಕೆಟಿಗರ ಸಂಬಳದ ಬಗ್ಗೆ ಮಾತನಾಡುವುದಾದರೆ, ಅವರು ಪಡೆಯುವ ಮೊತ್ತವು ಆಸ್ಟ್ರೇಲಿಯಾದ ಕ್ರಿಕೆಟಿಗರು ಒಂದು ಪಂದ್ಯದ ಶುಲ್ಕಕ್ಕೆ ಸಮನಾಗಿರುವುದಿಲ್ಲ.

ಮಾಧ್ಯಮ ವರದಿಗಳ ಪ್ರಕಾರ, ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟಿಗರ ಸಂಭಾವನೆ 58000 ರೂ. ಅವರು ವಾರ್ಷಿಕವಾಗಿ ಸುಮಾರು 6 ಲಕ್ಷ ರೂ. ವೇತನ ಪಡೆಯುತ್ತಾರೆ.

ಆದರೆ ಯುವ ಆಟಗಾರರಿಗೆ ನೀಡುವ ಸಂಭಾವನೆ 32 ರಿಂದ 48 ಸಾವಿರ ರೂ. ಮಾತ್ರ. ಮತ್ತು ಅವರು ವಾರ್ಷಿಕವಾಗಿ 4 ರಿಂದ 5 ಲಕ್ಷ ರೂ. ಸಂಬಳ ಪಡೆಯುತ್ತಾರೆ.

ಇದಕ್ಕೆ ತದ್ವಿರುದ್ಧವಾಗಿ ಆಸ್ಟ್ರೇಲಿಯದ ಕ್ರಿಕೆಟಿಗರು ಒಂದು ಟಿ20 ಪಂದ್ಯವನ್ನು ಆಡುವುದಕ್ಕಾಗಿ 5 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆಯುತ್ತಾರೆ.

ಅಂದರೆ ಆಸೀಸ್ ಕ್ರಿಕೆಟಿಗರು ಒಂದು ಪಂದ್ಯಕ್ಕೆ ಪಡೆಯುವ ವೇತನ, ಅಫ್ಘಾನಿಸ್ತಾನ ಕ್ರಿಕೆಟಿಗರು ಒಂದು ವರ್ಷಕ್ಕೆ ಪಡೆಯುವ ವೇತನಕ್ಕೆ ಸಮನಾಗಿದೆ.