ಒಂದು ಬದಲಾವಣೆ: 4ನೇ ಟೆಸ್ಟ್​ಗೆ ಭಾರತದ ಪ್ಲೇಯಿಂಗ್ XI ಇಲ್ಲಿದೆ

23 February 2024

Author: Vinay Bhat

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ. ಇವರು ಟಾಸ್ ಸೋತು ಬೌಲಿಂಗ್ ಮಾಡಲು ಕಣಕ್ಕಿಳಿದಿದ್ದಾರೆ.

ರೋಹಿತ್ ಶರ್ಮಾ

ಭರ್ಜರಿ ಫಾರ್ಮ್​ನಲ್ಲಿರುವ ಯಶಸ್ವಿ ಜೈಸ್ವಾಲ್ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಪಂದ್ಯದಲ್ಲಿ ಕೂಡ ಇವರ ಖಾತೆಯಿಂದ ಶತಕ ನಿರೀಕ್ಷಿಸಲಾಗಿದೆ.

ಯಶಸ್ವಿ ಜೈಸ್ವಾಲ್

ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿರುವ ಶುಭ್​ಮನ್ ಗಿಲ್​ಗೆ ಇದೊಂದು ಅಗ್ನಿ ಪರೀಕ್ಷೆಯಾಗಿದೆ.

ಶುಭ್​ಮನ್ ಗಿಲ್

ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಸ್ಥಾನ ಪಡೆದಿರುವ ರಜತ್ ಪಾಟಿದಾರ್ ಈವರೆಗೆ ಮೋಡಿ ಮಾಡಿಲ್ಲ. ಈ ಟೆಸ್ಟ್ ಇವರಿಗೆ ಮಹತ್ವದ್ದಾಗಿದೆ.

ರಜತ್ ಪಾಟಿದಾರ್

ಮೂರನೇ ಟೆಸ್ಟ್​ನಲ್ಲಿ ಕಣಕ್ಕಿಳಿದು ಎರಡು ಅರ್ಧಶತಕ ಸಿಡಿಸಿರುವ ಸರ್ಫರಾಝ್ ಖಾನ್ ಕೂಡ ಭರ್ಜರಿ ಫಾರ್ಮ್​ನಲ್ಲಿದ್ದಾರೆ.

ಸರ್ಫರಾಝ್ ಖಾನ್

ರವೀಂದ್ರ ಜಡೇಜಾ ಆಲ್ರೌಂಡ್ ಜವಾಬ್ದಾರಿ ಟೀಮ್ ಇಂಡಿಯಾಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಲಿದೆ.

ರವೀಂದ್ರ ಜಡೇಜಾ

ವಿಕೆಟ್ ಕೀಪರ್ ಜವಾಬ್ದಾರಿಯನ್ನು ಧ್ರುವ್ ಜುರೆಲ್ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು, ಬ್ಯಾಟಿಂಗ್​ನಲ್ಲೂ ಭರವಸೆ ಮೂಡಿಸಿದ್ದಾರೆ.

ಧ್ರುವ್ ಜುರೆಲ್

ಆರ್. ಅಶ್ವಿನ್ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ನರ್ಸ್ ಆಗಿದ್ದು, ಇವರು ಬ್ಯಾಟಿಂಗ್​ನಲ್ಲೂ ತಂಡಕ್ಕೆ ಕೊಡುಗೆ ನೀಡಬಲ್ಲರು.

ಅಶ್ವಿನ್-ಕುಲ್ದೀಪ್

ಮೊಹಮ್ಮದ್ ಸಿರಾಜ್ ವೇಗದ ವಿಭಾಗವನ್ನು ಮುನ್ನಡೆಸಲಿದ್ದಾರೆ. ಜಸ್​ಪ್ರಿತ್ ಬುಮ್ರಾ ಅಲಭ್ಯತೆಯಲ್ಲಿ ಇವರು ಮತ್ವದ ಪಾತ್ರವಹಿಸಲಿದ್ದಾರೆ.

ಮೊಹಮ್ಮದ್ ಸಿರಾಜ್

ಆಕಾಶ್ ದೀಪ್ ಈ ಪಂದ್ಯದ ಮೂಲಕ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದು, ಚೊಚ್ಚಲ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ನೋಡಬೇಕು.

ಆಕಾಶ್ ದೀಪ್