ಮೊದಲ ಅಭ್ಯಾಸ ಪಂದ್ಯದಲ್ಲಿ ಪಾಕ್ ನಾಯಕ ಬಾಬರ್ ಆಝಂ ಬ್ಯಾಟ್ ಅಬ್ಬರಿಸಿದೆ.

29 September 2023

ಇಂದಿನಿಂದ ಆರಂಭವಾಗಿರುವ ವಿಶ್ವಕಪ್ ಅಭ್ಯಾಸ ಪಂದ್ಯಗಲ್ಲಿ ಬಾಬರ್ ಬ್ಯಾಟ್ ಅರ್ಧಶತಕ ಸಿಡಿಸಿ ಮಿಂಚಿದೆ.

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬಾಬರ್ ಈ ಅರ್ಧಶತಕ ಸಿಡಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡದ ಪರ ಬಾಬರ್ 80 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಅಡಿದರು.

ತಮ್ಮ ಇನ್ನಿಂಗ್ಸ್​ನಲ್ಲಿ 84 ಎಸೆತಗಳನ್ನು ಎದುರಿಸಿದ ಬಾಬರ್ 8 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು.

ವಾಸ್ತವವಾಗಿ ಭಾರತದಲ್ಲಿ ಬಾಬರ್ ಆಝಂ ಅವರ ಮೊದಲ ಅರ್ಧಶತಕವಾಗಿದೆ.

ಪ್ರಸ್ತುತ ಹೈದರಾಬಾದ್‌ನಲ್ಲಿ ಅಭ್ಯಾಸ ಪಂದ್ಯವನ್ನಾಡುತ್ತಿರುವ ಪಾಕ್ ತಂಡ ಅಕ್ಟೋಬರ್ 3 ರಂದು ಇದೇ ಮೈದಾನದಲ್ಲಿ ತನ್ನ ಮೊದಲ ವಿಶ್ವಕಪ್‌ ಪಂದ್ಯವನ್ನಾಡಲಿದೆ.

ಈ ಪಂದ್ಯದಲ್ಲಿ ಬಾಬರ್ ಅಲ್ಲದೆ ತಂಡದ ವಿಕೆಟ್‌ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಸ್ಫೋಟಕ ಶತಕ ಬಾರಿಸಿದರು.