ಭಾರತ ತೊರೆಯುವ ಮುನ್ನ ಮಾಲ್​ಗೆ ತೆರಳಿ ಸೀರೆ ಖರೀದಿಸಿದ ಬಾಬರ್

11-November-2023

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಂ ಸದ್ಯ ಐಸಿಸಿ ಏಕದಿನ ವಿಶ್ವಕಪ್ 2023ರ ಪ್ರಯುಕ್ತ ಭಾರತದಲ್ಲಿದ್ದಾರೆ.

ಭಾರತದಲ್ಲಿ ಬಾಬರ್

ಈ ಬಾರಿಯ ವಿಶ್ವಕಪ್​ನಲ್ಲಿ ಪಾಕ್ ಕಳಪೆ ಪ್ರದರ್ಶನ ತೋರಿ ಬಹುತೇಕ ಟೂರ್ನಿಯಿಂದ ಔಟ್ ಆಗಿದೆ. ಭಾನುವಾರ ತವರಿಗೆ ಮರಳಬಹುದು.

ಕಳಪೆ ಪ್ರದರ್ಶನ

ಇಂದು ಈಡನ್ ಗಾರ್ಡನ್ಸ್​ನಲ್ಲಿ ಪಾಕ್-ಇಂಗ್ಲೆಂಡ್ ಮುಖಾಮುಖಿ ಆಗಲಿದೆ. ನಂತರ ತವರಿಗೆ ಮರಳಲಿದ್ದು, ಇದಕ್ಕೂ ಮುನ್ನ ಬಾಬರ್ ಭರ್ಜರಿ ಶಾಪಿಂಗ್ ಮಾಡಿದ್ದಾರೆ.

ಭಾರತದಲ್ಲಿ ಬಾಬರ್

ಪಾಕಿಸ್ತಾನ ತಂಡ ಲೀಗ್ ಹಂತದಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡುವ ಮುನ್ನ ಬಾಬರ್ ಅಝಂ ಕೋಲ್ಕತ್ತಾದಲ್ಲಿ ಶಾಪಿಂಗ್ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ಶಾಪಿಂಗ್

ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಬಾಬರ್ ಕೋಲ್ಕತ್ತಾದ ಮಾಲ್‌ಗೆ ತೆರಳಿದ್ದಾರೆ. ಅಲ್ಲಿ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಶಾಪಿಂಗ್ ಮಾಡಿದ್ದಾರೆ.

ಬಟ್ಟೆ ಖರೀದಿ

ಬಾಬರ್ ಮಾಲ್‌ನ ಅಂಗಡಿಯಿಂದ 7 ಸಾರಿಗಳನ್ನು ಖರೀದಿಸಿದ್ದಾರೆ. ಅಂಗಡಿಯಿಂದಲೇ ಮನೆಗೆ ವಿಡಿಯೋ ಕಾಲ್ ಮಾಡಿ ಸೀರೆಗಳನ್ನು ಆರಿಸಿ ಎಂದು ಹೇಳಿದ್ದಾರೆ.

7 ಸೀರೆ ಖರೀದಿ

ಬಾಬರ್ ಖರೀದಿಸಿದ 7 ಸೀರೆಗಳಲ್ಲಿ ಶಿಫಾನ್ ಜಾರ್ಜೆಟ್ ಸಾರಿ ಕೂಡ ಸೇರಿದೆ. ಅಂಗಡಿಯ ಉದ್ಯೋಗಿ ಈ ಮಾಹಿತಿಯನ್ನು ತಿಳಿಸಿದ್ದಾರೆ.

ವಿಶೇಷ ಸಾರಿ

ಕ್ರಿಕೆಟ್ ಸೂಪರ್‌ಸ್ಟಾರ್ ಆಗಿದ್ದರೂ ಬಾಬರ್ ಪಂಜಾಬಿಯಲ್ಲಿ ಸರಾಗವಾಗಿ ಮಾತನಾಡುತ್ತಿದ್ದರಂತೆ. ಸಾರಿಗಳ ಜೊತೆಗೆ ಬಾಬರ್ ಮಾಲ್‌ನಿಂದ ಸನ್‌ಗ್ಲಾಸ್‌ಗಳನ್ನು ಸಹ ಖರೀದಿಸಿದ್ದಾರೆ.

ಭರ್ಜರಿ ಶಾಪಿಂಗ್

ವಿಶ್ವಕಪ್ ಪಾಯಿಂಟ್ಸ್ ಟೇಬಲ್​ನಲ್ಲಿ ಏನು ಬದಲಾವಣೆ ಆಗಿದೆ ನೋಡಿ