ಈ ವಿಷಯದಲ್ಲಿ ಟೀಂ ಇಂಡಿಯಾಗಿಂತ ಡಚ್ಚರೇ ಬೆಸ್ಟ್ ಎಂದ ಐಸಿಸಿ..!

22 November 2023

ಈ ಬಾರಿಯ ಏಕದಿನ ವಿಶ್ವಕಪ್​ನಲ್ಲಿ ಅತ್ಯುತ್ತಮವಾಗಿ ಫೀಲ್ಡಿಂಗ್ ಮಾಡಿದ ತಂಡಗಳನ್ನು ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ.

ಐಸಿಸಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಟೀಂ ಇಂಡಿಯಾಗಿಂತ ನೆದರ್ಲೆಂಡ್ಸ್ ತಂಡವೇ ಬೆಸ್ಟ್ ಎಂಬ ಶಾಕಿಂಗ್ ವರದಿ ಹೊರಬಿದ್ದಿದೆ.

ಬೆಸ್ಟ್ ಫೀಲ್ಡಿಂಗ್ ಮಾಡಿದ ತಂಡಗಳ ಪೈಕಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಆಸ್ಟ್ರೇಲಿಯಾ ತಂಡ ಇಡೀ ಟೂರ್ನಿಯಲ್ಲಿ 62 ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದು, ಕೇವಲ ಮೂರನ್ನು ಕೈಬಿಟ್ಟಿದೆ. ಈ ಮೂಲಕ 383.58 ಫೀಲ್ಡಿಂಗ್ ಇಂಪ್ಯಾಕ್ಟ್ ರೇಟಿಂಗ್ ಪಾಯಿಂಟ್‌ ಪಡೆದುಕೊಂಡಿದೆ.

ದಕ್ಷಿಣ ಆಫ್ರಿಕಾ ತಂಡ 340.59 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಮೂರನೇ ಸ್ಥಾನದಲ್ಲಿದ್ದಲ್ಲಿರುವ ನೆದರ್ಲೆಂಡ್ಸ್ ತಂಡ 292.02 ಅಂಕಗಳನ್ನು ಪಡೆದುಕೊಂಡಿದೆ.

ಅಚ್ಚರಿಯೆಂಬಂತೆ ಭಾರತ ತಂಡ 281.04 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ನೆದರ್ಲೆಂಡ್ಸ್‌ಗಿಂತ ಹಿಂದುಳಿದಿದೆ.

255.43 ಹಾಗೂ 225.53 ರೇಟಿಂಗ್ ಪಾಯಿಂಟ್‌ ಪಡೆದಿರುವ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಕ್ರಮವಾಗಿ ಐದು ಮತ್ತು 6ನೇ ಸ್ಥಾನವನ್ನು ಪಡೆದುಕೊಂಡಿವೆ.

ಪಾಕಿಸ್ತಾನ ಕ್ರಿಕೆಟ್ ತಂಡ 212 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 8 ನೇ ಸ್ಥಾನದಲ್ಲಿದೆ.

9 ನೇ ಸ್ಥಾನದಲ್ಲಿ ಬಾಂಗ್ಲಾದೇಶ ತಂಡವಿದ್ದರೆ ಅಫ್ಘಾನಿಸ್ತಾನ ತಂಡ 123.12 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

NEXT: ಒಂದು ವಿಶ್ವಕಪ್‌ ಆವೃತ್ತಿಯಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತೀಯರಿವರು