01-06-2024

Dinesh Karthik Net Worth: ದಿನೇಶ್ ಕಾರ್ತಿಕ್ ಎಷ್ಟು ಕೋಟಿಯ ಒಡೆಯ ಗೊತ್ತಾ?

Author: ಪೃಥ್ವಿ ಶಂಕರ

ಟೀಂ ಇಂಡಿಯಾದ ಸ್ಟಾರ್ ಆಟಗಾರ ದಿನೇಶ್ ಕಾರ್ತಿಕ್ ತಮ್ಮ ಜನ್ಮ ದಿನದಂದೇ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

2004 ರಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದ ದಿನೇಶ್ ಕಾರ್ತಿಕ್ ಅವರ ವೃತ್ತಿಜೀವನ ಸುಮಾರು 20 ವರ್ಷಗಳ ಕಾಲ ನಡೆಯಿತು.

ಈ 20 ವರ್ಷಗಳ ವೃತ್ತಿಜೀವನದಲ್ಲಿ ದಿನೇಶ್ ಕಾರ್ತಿಕ್ ಕ್ರಿಕೆಟ್‌ನಿಂದ ಸಾಕಷ್ಟು ಹಣ ಸಂಪಾದಿಸಿದ್ದು, ಅವರ ಆಸ್ತಿ ಮೌಲ್ಯ 100 ಕೋಟಿಗೂ ಹೆಚ್ಚು ಎಂದು ವರದಿಯಾಗಿದೆ.

ಐಪಿಎಲ್​ನಲ್ಲಿ 17 ಆವೃತ್ತಿಗಳನ್ನು ಆಡಿರುವ ಕಾರ್ತಿಕ್, 6 ತಂಡಗಳ ಪರ ಕಣಕ್ಕಿಳಿದಿದ್ದರು. ಹೀಗಾಗಿ ಕಾರ್ತಿಕ್ ಐಪಿಎಲ್​ನಿಂದಲೇ 90 ಕೋಟಿ ರೂ. ಸಂಪಾದಿಸಿದ್ದಾರೆ.

ಇನ್ನು ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ.. ದಿನೇಶ್ ಕಾರ್ತಿಕ್ 2012 ರಲ್ಲಿ ತಮ್ಮ ಮೊದಲ ಪತ್ನಿ ನಿಕಿತಾ ವಂಝಾರರಿಂದ ವಿಚ್ಛೇದನ ಪಡೆದರು.

ಇದಕ್ಕೆ ಕಾರಣ, ಕಾರ್ತಿಕ್ ಅವರ ಸಹ ಆಟಗಾರ ಮುರಳಿ ವಿಜಯ್. ಕಾರ್ತಿಕ್ ಮಡದಿ ನಿಕಿತಾ ಹಾಗೂ ಮುರುಳಿ ವಿಜಯ್ ಪ್ರೀತಿಯಲ್ಲಿ ಬಿದ್ದಿದ್ದರು. ಹೀಗಾಗಿ ಕಾರ್ತಿಕ್ ಬೇರಾಗಬೇಕಾಯಿತು.

ನಂತರ ಕಾರ್ತಿಕ್ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರೊಂದಿಗೆ 2013 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು 2015 ರಲ್ಲಿ ವಿವಾಹವಾದರು.

ಮೊದಲ ಬಾರಿಗೆ ಜಿಮ್‌ನಲ್ಲಿ ಭೇಟಿಯಾದ ಇವರಿಬ್ಬರು ನಂತರ ಒಳ್ಳೆಯ ಸ್ನೇಹಿತರಾದರು. ಬಳಿಕ ಈ ಸಂಬಂಧ ವೈವಾಹಿಕ ಜೀವನಕ್ಕೆ ಕಾಲಿಡುವಂತೆ ಮಾಡಿತು.