30-05-2024

ಟಿ20 ವಿಶ್ವಕಪ್ ಆಡಿದ ಆಟಗಾರನಿಗೆ 5 ವರ್ಷ ಜೈಲು! 20 ವರ್ಷಗಳ ನಿಷೇಧ

Author: ಪೃಥ್ವಿ ಶಂಕರ

9ನೇ ಆವೃತ್ತಿಯ ಟಿ20 ವಿಶ್ವಕಪ್ ಜೂನ್ 2 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ಪ್ರಾರಂಭವಾಗಲಿದೆ.

ಕಳೆದ 17 ವರ್ಷಗಳಲ್ಲಿ ಅನೇಕ ಆಟಗಾರರು ಈ ಪಂದ್ಯಾವಳಿಯಲ್ಲಿ ಆಡಿದ್ದಾರೆ. ತಮ್ಮ ಪ್ರತಿಭೆಯ ಮೂಲಕ ವಿಶ್ವಮನ್ನಣೆ ಪಡೆದಿದ್ದಾರೆ.  ಆದರೆ ಅವರಲ್ಲಿ ಒಬ್ಬ ಆಟಗಾರ ಇದೀಗ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ.

ಈ ಆಟಗಾರ ಬೇರ್ಯಾರು ಅಲ್ಲ, ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ಗುಲಾಮ್ ಬೋಡಿ. ಗುಲಾಮ್ ಅವರು 2007 ರಲ್ಲಿ  ನಡೆದ ಮೊದಲ ಟಿ20 ವಿಶ್ವಕಪ್‌ನ ಭಾಗವಾಗಿದ್ದರು.

ಭಾರತೀಯ ಮೂಲದ ಬೋಡಿ ಅವರ ಕುಟುಂಬ ಚಿಕ್ಕವಯಸ್ಸಿನಲ್ಲೇ ದಕ್ಷಿಣ ಆಫ್ರಿಕಾದಲ್ಲಿ ಬದುಕು ಕಟ್ಟಿಕೊಂಡಿತ್ತು.

ಚಿಕ್ಕಂದಿನಿಂದಲೂ ಆಫ್ರಿಕಾದಲ್ಲೇ ಕ್ರಿಕೆಟ್ ಆರಂಭಿಸಿದ ಬೋಡಿ, ರಾಜ್ಯ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೂ ಆಡುವ ಅವಕಾಶಗಳನ್ನು ಪಡೆದರು.

ಆದರೆ ಅವರ ಅಂತರಾಷ್ಟ್ರೀಯ ವೃತ್ತಿಜೀವನವು ಕೇವಲ 2 ಏಕದಿನ ಮತ್ತು 1 ಟಿ20 ಪಂದ್ಯಕ್ಕೆ ಮಾತ್ರ ಸೀಮಿತವಾಗಿತ್ತು. ಇದರಲ್ಲಿ ಅವರು ಒಟ್ಟು 91 ರನ್ ಮಾತ್ರ ಕಲೆಹಾಕಿದ್ದರು.

ಆದರೆ  ಗುಲಾಮ್ ಬೋಡಿ ಎಸಗಿದ ಅದೊಂದು ಲೋಪದಿಂದಾಗಿ ಅವರು ತಮ್ಮ ಕ್ರಿಕೆಟ್ ಬದುಕನ್ನೇ ಅಂತ್ಯಗೊಳಿಸಬೇಕಾಯಿತು.

2016 ರಲ್ಲಿ ನಡೆದಿದ್ದ ರಾಮ್-ಸ್ಲಾಮ್ ಟಿ20 ಚಾಲೆಂಜ್ ಪಂದ್ಯಾವಳಿಯ ಸಮಯದಲ್ಲಿ ಬೋಡಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂತು.

ವಿಚಾರಣೆಯ ನಂತರ ಗುಲಾಮ್ ಬೋಡಿ ತಪ್ಪಿತಸ್ಥರೆಂದು ಸಾಬೀತಾದ ನಂತರ ಅವರನ್ನು 20 ವರ್ಷಗಳ ಕಾಲ ಕ್ರಿಕೆಟ್​ನಿಂದ ನಿಷೇಧಿಸಲಾಯಿತು.

2018 ರಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡ ಬೋಡಿಗೆ 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಆದರೆ ಆ ನಂತರ 2019 ರಲ್ಲಿ, ನ್ಯಾಯಾಲಯವು ಅವರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು.

NEXT: T20 World Cup: ಕಳೆದ 8 ಆವೃತ್ತಿಗಳಲ್ಲಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದವರಿವರು