SA vs IND: ಆಫ್ರಿಕಾ ತಂಡದ ಮಾಜಿ ನಾಯಕನಿಗೆ ಇದೇ ಕೊನೆಯ ಟೆಸ್ಟ್ ಸರಣಿ?
Author: ಪೃಥ್ವಿ ಶಂಕರ
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆರಂಭಿಕ ಆಟಗಾರ ಡೀನ್ ಎಲ್ಗರ್ ಮುಂಬರುವ ಭಾರತ ಹಾಗೂ ಆಫ್ರಿಕಾ ಟೆಸ್ಟ್ ಸರಣಿಯ ನಂತರ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಆಫ್ರಿಕಾ ಪರ 84 ಟೆಸ್ಟ್ ಪಂದ್ಯಗಳನ್ನಾಡಿರುವ ಎಲ್ಗರ್ 37.28ರ ಸರಾಸರಿಯಲ್ಲಿ 5146 ರನ್ ಗಳಿಸಿದ್ದಾರೆ.
ವಾಸ್ತವವಾಗಿ ಅವರನ್ನು ವರ್ಷದ ಆರಂಭದಲ್ಲಿ ಟೆಸ್ಟ್ ನಾಯಕತ್ವದಿಂದ ತೆಗೆದುಹಾಕಿ, ತೆಂಬಾ ಬವುಮಾ ಅವರಿಕೆ ನಾಯಕತ್ವವನ್ನು ಹಸ್ತಾಂತರಿಸಲಾಗಿತ್ತು.
ವರದಿಗಳ ಪ್ರಕಾರ ಎಲ್ಗರ್ ಅವರನ್ನು ಟೆಸ್ಟ್ ತಂಡದಿಂದ ಹೊರಗಿಡುವ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಸ್ವತಃ ಎಲ್ಗರ್ ಅವರೇ ನಂಬಿದ್ದಾರೆ ಎಂದು ವರದಿ ಯಾಗಿದೆ.
ಈ ನಡುವೆ ಎಲ್ಗರ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ನಾಯಕನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿತ್ತು. ಆದರೀಗ ಎಲ್ಗರ್ ಅವರ ನಿವೃತ್ತಿ ನಿರ್ಧಾರದಿಂದ ಈ ಸ್ಥಾನಕ್ಕೆ ಮತ್ತೊಬ್ಬರು ಸಾಧ್ಯತೆಗಳಿವೆ.
ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿರುವ ಎಲ್ಗರ್, 2018 ರಲ್ಲಿ ನಾನು ನೀಡಿದ ಪ್ರದರ್ಶನಕ್ಕೆ ಹೆಚ್ಚಿನ ಕ್ರೆಡಿಟ್ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಹಳ ಸಮಯದಿಂದ, ನಾನು ತಂಡಕ್ಕಾಗಿ ಏನು ಮಾಡಿದ್ದೇನೆ ಎಂಬುದೆಲ್ಲವನ್ನು ಮರೆಮಾಚಲಾಗಿದೆ. ಪ್ರತಿ ತಂಡಕ್ಕೂ ನನ್ನಂತಹ ಕ್ರಿಕೆಟಿಗರು ಬೇಕು ಎಂಬುದನ್ನು ಜನರು ಮರೆಯುತ್ತಾರೆ ಎಂದು ಎಲ್ಗರ್ ಹೇಳಿಕೊಂಡಿದ್ದಾರೆ.
ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯ ನಂತರ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿಯು ನಡೆಯಲಿದೆ.
ಈ ಸರಣಿಯ ಮೊದಲ ಪಂದ್ಯ ಡಿಸೆಂಬರ್ 26 ರಿಂದ ಡಿಸೆಂಬರ್ 30 ರವರೆಗೆ ನಡೆಯಲಿದೆ. ಎರಡನೇ ಪಂದ್ಯವು 2024ರ ಜನವರಿ 3 ರಿಂದ ಆರಂಭವಾಗಲಿದೆ.