ಕೆಕೆಆರ್ ತಂಡದ ಎಲ್ಲ ಆಟಗಾರರ ಮುಂದೆ ಕ್ಷಮೆ ಕೇಳಿದ ಗೌತಮ್ ಗಂಭೀರ್
25-Marchy-2024
Author: Vinay Bhat
ಐಪಿಎಲ್ 2024 ಪ್ರಾರಂಭವಾಗಿದ್ದು, ಎಲ್ಲ ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಖಾತೆ ತೆರೆದಿದೆ.
ಐಪಿಎಲ್ 2024
ಕೋಲ್ಕತ್ತಾ ನೈಟ್ ರೈಡರ್ಸ್‌ನ ಮಾಜಿ ನಾಯಕ ಮತ್ತು ಮೆಂಟರ್ ಆಗಿರುವ ಗೌತಮ್ ಗಂಭೀರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚೆಗಷ್ಟೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಗೌತಮ್ ಗಂಭೀರ್
ಗಂಭೀರ್ ಹಂಚಿಕೊಂಡಿರುವ ವಿಡಿಯೋದಲ್ಲಿ ಸುಮಾರು 14 ವರ್ಷದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ
2012ರ ಫೈನಲ್‌ನಿಂದ ಬ್ರೆಂಡನ್ ಮೆಕಲಮ್ ಅವರನ್ನು ಯಾಕೆ ಕೈಬಿಟ್ಟಿದ್ದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಇದಕ್ಕಾಗಿ ಇಡೀ ತಂಡದ ಮುಂದೆ ಕ್ಷಮೆಯಾಚಿಸಿದ್ದರಂತೆ.
ಕ್ಷಮೆಯಾಚನೆ
ಮೆಕಲಮ್ ಮತ್ತು ನಾನು ಇಡೀ ಋತುವನ್ನು ಆಡಿದ್ದೆವು, ಆದರೆ ಫೈನಲ್ ಮುನ್ನ ಬಾಲಾಜಿ ಗಾಯಗೊಂಡರು. ಹೀಗಾಗಿ ಬ್ರೆಟ್ ಲೀ ಅವರನ್ನು ಆಡಿಸಬೇಕಾಯಿತು ಎಂದು ಗಂಭೀರ್ ಹೇಳಿದ್ದಾರೆ.
ಫೈನಲ್'ನಿಂದ ಹೊರಕ್ಕೆ
ಬ್ರೆಟ್ ಲೀ ಆಡಬೇಕಾದರೆ ಓರ್ವ ವಿದೇಶಿ ಆಟಗಾರನನ್ನು ಹೊರಹಾಕಬೇಕು. ಆದ್ದರಿಂದ ಮೆಕಲಮ್ ಹೊರಬಂದರು. ಇದಕ್ಕಾಗಿ ಮೈದಾನಕ್ಕೆ ಹೋಗುವ ಕ್ಷಮೆ ಕೇಳಿದ್ದರಂತೆ ಗಂಭೀರ್.
ವಿದೇಶಿ ಪ್ಲೇಯರ್
ನಾಯಕನಿಗೆ ಯಾವತ್ತೂ ಅಹಂ ಇರಬಾರದು ಎಂದ ಗಂಭೀರ್, ಆ ನಿರ್ಧಾರ ಕೇವಲ ತಂಡದ ಹಿತಕ್ಕಾಗಿಯೆ ಹೊರತು ಯಾವುದೇ ರೂಪದಿಂದಲ್ಲ ಎಂದು ಗಂಭೀರ್ ಹೇಳಿದ್ದಾರೆ.
ಅಹಂ ಇರಬಾರದು
IPL 2024: ಆರ್ಸಿಬಿ ಮುಂದಿನ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ