15-12-2023
10 ಐಪಿಎಲ್ ತಂಡಗಳ ಬಳಿ ಎಷ್ಟು ಹಣವಿದೆ? ಎಷ್ಟು ಆಟಗಾರರನ್ನು ಖರೀದಿಸಬೇಕಿದೆ?
Author: ಪೃಥ್ವಿ ಶಂಕರ
ಗುಜರಾತ್ ಟೈಟಾನ್ಸ್ ಬಳಿ 38.15 ಕೋಟಿ ರೂ. ಇದ್ದು, ತಂಡವು ಎಂಟು ಆಟಗಾರರನ್ನು ಖರೀದಿಸಬೇಕಾಗಿದೆ. ಈ ಪೈಕಿ ಇಬ್ಬರು ವಿದೇಶಿ ಆಟಗಾರರ ಜಾಗ ಖಾಲಿ ಇದೆ.
ಸನ್‌ರೈಸರ್ಸ್ ಹೈದರಾಬಾದ್ ಬಳಿ 34 ಕೋಟಿ ರೂ. ಹಣವಿದೆ. ತಂಡಕ್ಕೆ ಒಟ್ಟು 6 ಸ್ಲಾಟ್‌ಗಳು ಉಳಿದಿವೆ. ಈ ಪೈಕಿ 3 ವಿದೇಶಿ ಆಟಗಾರರ ಸ್ಥಾನಗಳೂ ಖಾಲಿ ಇವೆ.
ಕೋಲ್ಕತ್ತಾ ನೈಟ್ ರೈಡರ್ಸ್ ಬಳಿ 32.7 ಕೋಟಿ ರೂ. ಹಣವಿದೆ. 12 ಸ್ಲಾಟ್‌ಗಳು ಖಾಲಿ ಇದ್ದು, ಈ ಪೈಕಿ ನಾಲ್ವರು ವಿದೇಶಿ ಆಟಗಾರರನ್ನು ತಂಡ ಖರೀದಿಸಬಹುದಾಗಿದೆ.
ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಬಳಿ 31.4 ಕೋಟಿ ರೂ. ಹಣವಿದ್ದು, 6 ಖಾಲಿ ಸ್ಲಾಟ್‌ಗಳಲ್ಲಿ ಮೂವರು ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ.
ಪಂಜಾಬ್ ಕಿಂಗ್ಸ್ ಪರ್ಸ್ನಲ್ಲಿ ಇನ್ನೂ 29.1 ಕೋಟಿ ರೂ. ಹಣವಿದೆ. ತಂಡಕ್ಕೆ ಇನ್ನೂ 8 ಸ್ಲಾಟ್‌ಗಳು ಉಳಿದಿದ್ದು, ತಂಡಕ್ಕೆ ಇಬ್ಬರು ವಿದೇಶಿ ಆಟಗಾರರ ಅಗತ್ಯವಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪ್ರಸ್ತುತ 28.95 ಕೋಟಿ ರೂ. ಪರ್ಸ್ ಹೊಂದಿದೆ. ಇದರಲ್ಲಿ ತಂಡವು ಒಟ್ಟು 9 ಸ್ಲಾಟ್‌ಗಳನ್ನು ಭರ್ತಿ ಮಾಡಬೇಕಿದ್ದು, ಈ ಪೈಕಿ 4 ವಿದೇಶಿ ಆಟಗಾರರು ಬೇಕಾಗಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸ್ತುತ 23.25 ಕೋಟಿ ರೂ. ಹಣ ಉಳಿಸಿಕೊಂಡಿದೆ. ತಂಡವು ಇನ್ನೂ 6 ಆಟಗಾರರನ್ನು ಖರೀದಿಸಬಹುದಾಗಿದ್ದು, 3 ವಿದೇಶಿ ಆಟಗಾರರು ಬೇಕಾಗಿದ್ದಾರೆ.
ಮುಂಬೈ ಇಂಡಿಯನ್ಸ್ ಒಟ್ಟು 17.75 ಕೋಟಿ ರೂ. ಹಣ ಉಳಿಸಿಕೊಂಡಿ. ಎಂಟು ಆಟಗಾರರನ್ನು ಖರೀದಿಸಬೇಕಾಗಿದ್ದು, ಅದರಲ್ಲಿ ನಾಲ್ಕು ಸ್ಲಾಟ್‌ಗಳು ವಿದೇಶಿ ಆಟಗಾರರಿಗೆ ಮೀಸಲಿದೆ.
ಸದ್ಯ ರಾಜಸ್ಥಾನ್ ರಾಯಲ್ಸ್ ಬಳಿ ಒಟ್ಟು 14.5 ಕೋಟಿ ರೂ. ಹಣವಿದೆ ಇದರಲ್ಲಿ ತಂಡವು 8 ಆಟಗಾರರನ್ನು ಖರೀದಿಸಬೇಕಾಗಿದ್ದು, ಅದರಲ್ಲಿ ಮೂವರು ವಿದೇಶಿ ಆಟಗಾರರು ಇದ್ದಾರೆ.
ಲಕ್ನೋ ಬಳಿ 13.15 ಕೋಟಿ ರೂ. ಹಣವಿದೆ. ಇದರಲ್ಲಿ ತಂಡವು 6 ಸ್ಲಾಟ್‌ಗಳನ್ನು ಭರ್ತಿ ಮಾಡಬೇಕಿದ್ದು, ಅದರಲ್ಲಿ ಇಬ್ಬರು ವಿದೇಶಿ ಆಟಗಾರರ ಸ್ಥಾನ ಖಾಲಿ ಇದೆ.
NEXT: ಭಾರತೀಯ ಬೌಲರ್ಗಳ ವಿಶೇಷ ಪಟ್ಟಿಗೆ ಸೇರ್ಪಡೆಗೊಂಡ ಅರ್ಷದೀಪ್ ಸಿಂಗ್