ಟಿ20 ವಿಶ್ವಕಪ್ ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಗಳ ಪಟ್ಟಿ

20-May-2024

Author: Zahir

PC: Google

ಟಿ20 ವಿಶ್ವಕಪ್​ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ವಿಶ್ವ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಟಿ20 ವಿಶ್ವಕಪ್​ನಲ್ಲಿ 25 ಇನಿಂಗ್ಸ್ ಆಡಿರುವ ಕೊಹ್ಲಿ ಒಟ್ಟು 1141 ರನ್ ಕಲೆಹಾಕಿದ್ದಾರೆ.

1- ವಿರಾಟ್ ಕೊಹ್ಲಿ

PC: Google

2- ಮಹೇಲ ಜಯವರ್ಧನೆ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಶ್ರೀಲಂಕಾದ ಮಹೇಲ ಜಯವರ್ಧನೆ ಇದ್ದಾರೆ. ಟಿ20 ವಿಶ್ವಕಪ್​ನಲ್ಲಿ 31 ಇನಿಂಗ್ಸ್ ಆಡಿರುವ ಜಯವರ್ಧನೆ 1016 ರನ್ ಕಲೆಹಾಕಿದ್ದಾರೆ.

PC: Google

3- ಕ್ರಿಸ್ ಗೇಲ್ ಟಿ20 ವಿಶ್ವಕಪ್​ನಲ್ಲಿ 31 ಇನಿಂಗ್ಸ್ ಆಡಿರುವ ವೆಸ್ಟ್ ಇಂಡೀಸ್​ನ ಕ್ರಿಸ್ ಗೇಲ್ ಒಟ್ಟು 965 ರನ್ ಕಲೆಹಾಕಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದ್ದಾರೆ.

PC: Google

4- ರೋಹಿತ್ ಶರ್ಮಾ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಒಟ್ಟು 36 ಇನಿಂಗ್ಸ್ ಆಡಿರುವ ಹಿಟ್​ಮ್ಯಾನ್ 963 ರನ್ ಕಲೆಹಾಕಿದ್ದಾರೆ.

PC: Google

5- ತಿಲಕರತ್ನೆ ದಿಲ್ಶಾನ್ ಟಿ20 ವಿಶ್ವಕಪ್​ನಲ್ಲಿ 34 ಇನಿಂಗ್ಸ್ ಆಡಿರುವ ಶ್ರೀಲಂಕಾದ ಮಾಜಿ ನಾಯಕ ತಿಲಕರತ್ನೆ ದಿಲ್ಶಾನ್ ಒಟ್ಟು 897 ರನ್​ಗಳನ್ನು ಬಾರಿಸಿದ್ದಾರೆ.

PC: Google

6- ಡೇವಿಡ್ ವಾರ್ನರ್ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಟಿ20 ವಿಶ್ವಕಪ್​ನಲ್ಲಿ ಒಟ್ಟು 34 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 806 ರನ್ ಕಲೆಹಾಕಿ ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

PC: Google

7- ಜೋಸ್ ಬಟ್ಲರ್ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಟಿ20 ವಿಶ್ವಕಪ್​ನಲ್ಲಿ 27 ಇನಿಂಗ್ಸ್ ಆಡಿದ್ದು, ಈ ವೇಳೆ 799 ರನ್ ಕಲೆಹಾಕಿದ್ದಾರೆ.

PC: Google

8- ಶಕೀಬ್ ಅಲ್ ಹಸನ್ ಟಿ20 ವಿಶ್ವಕಪ್​ನಲ್ಲಿ 36 ಇನಿಂಗ್ಸ್ ಆಡಿರುವ ಬಾಂಗ್ಲಾದೇಶ್ ತಂಡದ ಮಾಜಿ ನಾಯಕ ಶಕೀಬ್ ಅಲ್ ಹಸನ್ ಒಟ್ಟು 742 ರನ್ ಕಲೆಹಾಕಿದ್ದಾರೆ.

PC: Google

PC: Google

9- ಎಬಿ ಡಿವಿಲಿಯರ್ಸ್​ ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಟಿ20 ವಿಶ್ವಕಪ್​ನಲ್ಲಿ ಒಟ್ಟು 29 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 717 ರನ್​ ಕಲೆಹಾಕಿದ್ದಾರೆ.

10- ಕೇನ್ ವಿಲಿಯಮ್ಸನ್ ಟಿ20 ವಿಶ್ವಕಪ್​ನಲ್ಲಿ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ 24 ಇನಿಂಗ್ಸ್ ಆಡಿದ್ದು, ಈ ವೇಳೆ ಒಟ್ಟು 699 ರನ್ ಕಲೆಹಾಕುವ ಮೂಲಕ ಟಾಪ್-10 ರನ್​ ಸರದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

PC: Google