14-11-2023

ವಿಶ್ವಕಪ್ ಸೆಮಿಫೈನಲ್​ಗಳು ಯಾವಾಗ?, ಎಲ್ಲಿ?, ಎಷ್ಟು ಗಂಟೆಗೆ?

ಸೆಮಿಫೈನಲ್ಸ್

ಐಸಿಸಿ ಏಕದಿನ ವಿಶ್ವಕಪ್ 2023ರ ಲೀಗ್ ಪಂದ್ಯಗಳು ಮುಕ್ತಾಯಗೊಂಡಿದ್ದು, ಇದೀಗ ನಾಲ್ಕು ತಂಡಗಳು ಸೆಮಿಫೈನಲ್​ಗೆ ಪ್ರವೇಶ ಪಡೆದಿದೆ.

ಮೊದಲ ಸೆಮಿಫೈನಲ್

ಮೊದಲ ಸೆಮಿಫೈನಲ್ ಭಾರತ ಹಾಗೂ ನ್ಯೂಝಿಲೆಂಡ್ ತಂಡಗಳ ನಡುವೆ ನವೆಂಬರ್ 15 ಬುಧವಾರದಂದು ನಡೆಯಲಿದೆ.

ಪಂದ್ಯ ಎಲ್ಲಿ?

ಭಾರತ ಹಾಗೂ ನ್ಯೂಝಿಲೆಂಡ್ ಸೆಮೀಸ್ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.

ಎರಡನೇ ಸೆಮೀಸ್

ಎರಡನೇ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನವೆಂಬರ್ 16 ರಂದು ಆಯೋಜಿಸಲಾಗಿದೆ.

ಪಂದ್ಯ ಎಲ್ಲಿ?

ಎರಡನೇ ಸೆಮೀಸ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದುಕೂಡ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.

ಫೈನಲ್​ಗೆ ಯಾರು?

ಮೊದಲ ಸೆಮಿಫೈನಲ್​ನಲ್ಲಿ ಗೆದ್ದ ತಂಡ ಹಾಗೂ ಎರಡನೇ ಸೆಮಿಫೈನಲ್​ನಲ್ಲಿ ಜಯ ಸಾಧಿಸಿದ ತಂಡ ಫೈನಲ್​ಗೆ ತಲುಪಲಿದೆ.

ಫೈನಲ್ ಯಾವಾಗ?

ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್ ಪಂದ್ಯ ನವೆಂಬರ್ 19 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ವಿಶ್ವಕಪ್ 2023ರಲ್ಲಿ ವೇಗದ ಶತಕ ಸಿಡಿಸಿದ್ದು ಇವರೇ ನೋಡಿ