06-01-2024

ಟಿ20 ವಿಶ್ವಕಪ್​ನಲ್ಲಿ ಭಾರತದ ವೇಳಾಪಟ್ಟಿ ಹೀಗಿದೆ

Author: ಪೃಥ್ವಿ ಶಂಕರ

ಮುಂಬರುವ ಟಿ20 ವಿಶ್ವಕಪ್  ಜೂನ್ 1ರಿಂದ 29 ರ ನಡುವೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ನಡೆಯಲಿದೆ.

ಈ ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯ ಜೂನ್ 5 ರಂದು ಐರ್ಲೆಂಡ್ ವಿರುದ್ಧ ನಡೆಯಲಿದೆ.

ಜೂನ್ 9 ರಂದು ಪಾಕಿಸ್ತಾನ ವಿರುದ್ಧ ಭಾರತ ತನ್ನ ಎರಡನೇ ಪಂದ್ಯವನ್ನು ಆಡಲಿದೆ.

ಜೂನ್ 12 ರಂದು ಸಹ-ಆತಿಥೇಯ ಅಮೆರಿಕದೊಂದಿಗೆ ಭಾರತದ ಮೂರನೇ ಪಂದ್ಯ ನಡೆಯಲ್ಲಿದೆ.

ಜೂನ್ 15 ರಂದು ಫ್ಲೋರಿಡಾದಲ್ಲಿ ಕೆನಡಾ ವಿರುದ್ಧ ಭಾರತ ತನ್ನ ನಾಲ್ಕನೇ ಪಂದ್ಯ ಆಡಲಿದೆ.

ಇದಾದ ಬಳಿಕ ಜೂನ್ 19 ರಿಂದ 24ರ ನಡುವೆ ಸೂಪರ್-8 ಪಂದ್ಯಗಳು ನಡೆಯಲಿವೆ.

ಮೊದಲ ಸೆಮಿಫೈನಲ್ ಜೂನ್ 26 ರಂದು ಮತ್ತು ಎರಡನೇ ಸೆಮಿಫೈನಲ್ ಜೂನ್ 27 ರಂದು ನಡೆಯಲಿದೆ.

ಜೂನ್ 29 ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲ್ಲಿದೆ.