12-06-2024

ICC Rankings: ಸೂರ್ಯನ ಪಾರುಪತ್ಯಕ್ಕೆ ಸದ್ಯಕ್ಕಿಲ್ಲ ಅಪಾಯ..!

Author: ಪೃಥ್ವಿ ಶಂಕರ

ಐಸಿಸಿ ಟಿ20 ಶ್ರೇಯಾಂಕದಲ್ಲಿ ಪ್ರಸ್ತುತ 837 ರೇಟಿಂಗ್ ಹೊಂದಿರುವ ಭಾರತದ ಸೂರ್ಯಕುಮಾರ್ ಯಾದವ್ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ನ ಫಿಲ್ ಸಾಲ್ಟ್ 800 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ.

ಒಂದು ಸ್ಥಾನ ಮೇಲೇರಿರುವ ಪಾಕ್ ನಾಯಕ ಬಾಬರ್ ಆಝಂ ಇದೀಗ 756 ರೇಟಿಂಗ್ ಪಾಯಿಂಟ್​ನೊಂದಿಗೆ ಮೂರನೇ ಸ್ಥಾನ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ಒಂದು ಸ್ಥಾನ ಕುಸಿದಿರುವ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 752 ರೇಟಿಂಗ್‌ನೊಂದಿಗೆ 4ನೇ ಸ್ಥಾನಕ್ಕೇರಿದ್ದಾರೆ.

ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಎರಡು ಸ್ಥಾನ ಮೇಲೇರಿ 719 ರೇಟಿಂಗ್‌ನೊಂದಿಗೆ 5 ನೇ ಸ್ಥಾನವನ್ನು ತಲುಪಿದ್ದಾರೆ.

ಭಾರತದ ಯಶಸ್ವಿ ಜೈಸ್ವಾಲ್ 700 ರೇಟಿಂಗ್‌ನೊಂದಿಗೆ 6ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ವೆಸ್ಟ್ ಇಂಡೀಸ್‌ನ ಬ್ರೆಂಡನ್ ಕಿಂಗ್ ಕೂಡ ಒಂದು ಸ್ಥಾನ ಮೇಲೇರಿದ್ದು,692 ರೇಟಿಂಗ್‌ನೊಂದಿಗೆ 7 ನೇ ಸ್ಥಾನಕ್ಕೆ ಬಂದಿದ್ದಾರೆ.

ದಕ್ಷಿಣ ಆಫ್ರಿಕಾದ ಏಡನ್ ಮಾರ್ಕ್ರಾಮ್ ಮೂರು ಸ್ಥಾನ ಕಳೆದುಕೊಂಡಿದ್ದು, ಈಗ 687 ರೇಟಿಂಗ್‌ನೊಂದಿಗೆ 8 ನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾದ ರೀಜಾ ಹೆಡ್ರಿಕ್ಸ್ 660 ರೇಟಿಂಗ್‌ನೊಂದಿಗೆ 9 ನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 6 ಸ್ಥಾನ ಜಿಗಿದಿದ್ದು, ಈಗ ಅವರು 651 ರೇಟಿಂಗ್‌ನೊಂದಿಗೆ ನೇರವಾಗಿ ಹತ್ತನೇ ಸ್ಥಾನಕ್ಕೆ ಬಂದಿದ್ದಾರೆ.