T20 ವಿಶ್ವಕಪ್​ನಲ್ಲಿ ಅತಿ ಹೆಚ್ಚಿ ವಿಕೆಟ್ ಕಿತ್ತ ಭಾರತೀಯರು ಇವರೇ

20-May-2024

Author: Vinay Bhat

ಆರ್. ಅಶ್ವಿನ್ 5 ವಿಶ್ವಕಪ್‌ಗಳ 24 ಪಂದ್ಯಗಳಲ್ಲಿ 32 ವಿಕೆಟ್‌ಗಳೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಆರ್. ಅಶ್ವಿನ್

Pic credit - Googlr

ಜಡೇಜಾ 22 ಟಿ20 ವಿಶ್ವಕಪ್ ಪಂದ್ಯಗಳಲ್ಲಿ 21 ವಿಕೆಟ್ ಪಡೆದಿದ್ದಾರೆ. 2021 ರಲ್ಲಿ ಸ್ಕಾಟ್ಲೆಂಡ್ ವಿರುದ್ಧ 14 ರನ್‌ಗಳಿಗೆ 3 ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆ.

ರವೀಂದ್ರ ಜಡೇಜಾ

Pic credit - Googlr

ಇರ್ಫಾನ್ ಪಠಾಣ್ ಅವರು 14 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 2007 ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದರು.

ಇರ್ಫಾನ್ ಪಠಾಣ್

Pic credit - Googlr

ಹರ್ಭಜನ್ ನಾಲ್ಕು ಟಿ20 ವಿಶ್ವಕಪ್‌ಗಳಲ್ಲಿ 19 ಪಂದ್ಯಗಳನ್ನು ಆಡಿದ್ದು, 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2012 ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ 4 ವಿಕೆಟ್‌ ಕಿತ್ತಿದ್ದರು.

ಹರ್ಭಜನ್ ಸಿಂಗ್

Pic credit - Googlr

ನೆಹ್ರಾ 10 ಟಿ20 ವಿಶ್ವಕಪ್ ಪಂದ್ಯಗಳಲ್ಲಿ 15 ವಿಕೆಟುಗಳನ್ನು ಪಡೆದಿದ್ದಾರೆ. 2010 ರಲ್ಲಿ ಅಫ್ಘಾನಿಸ್ತಾನದ ವಿರುದ್ಧ 3 ವಿಕೆಟ್ ಪಡೆದಿರುವುದು ಅತ್ಯುತ್ತಮ ಪ್ರದರ್ಶನವಾಗಿದೆ.

ಆಶಿಶ್ ನೆಹ್ರಾ

Pic credit - Googlr

ಶಮಿ 14 ಟಿ20 ವಿಶ್ವಕಪ್‌ ಪಂದ್ಯಗಳಲ್ಲಿ 14 ವಿಕೆಟ್‌ ಪಡೆದಿದ್ದಾರೆ. ಇಂಜುರಿಯ ಕಾರಣ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತವು ಇವರ ಸೇವೆಯನ್ನು ಕಳೆದುಕೊಳ್ಳಲಿದೆ.

ಮೊಹಮ್ಮದ್ ಶಮಿ

Pic credit - Googlr

ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್‌ನ ಮೂರು ಆವೃತ್ತಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಒಟ್ಟು 16 ಪಂದ್ಯಗಳಲ್ಲಿ ಇವರು 13 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಹಾರ್ದಿಕ್ ಪಾಂಡ್ಯ

Pic credit - Googlr

ಯುವರಾಜ್ ಸಿಂಗ್ ಟಿ20 ವಿಶ್ವಕಪ್‌ನ 31 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು 2007 ರಿಂದ 2016 ರವರೆಗಿನ ಎಲ್ಲಾ ವಿಶ್ವ ಟಿ20 ವಿಶ್ವಕಪ್ ಆಡಿದ್ದಾರೆ.

ಯುವರಾಜ್ ಸಿಂಗ್

Pic credit - Googlr

ಜಹೀರ್ ಟಿ20 ವಿಶ್ವಕಪ್‌ನ ಎರಡನೇ, ಮೂರನೇ ಮತ್ತು ನಾಲ್ಕನೇ ಆವೃತ್ತಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಒಟ್ಟು 12 ವಿಕೆಟ್‌ಗಳನ್ನು ಪಡೆದಿದ್ದಾರೆ.

ಜಹೀರ್ ಖಾನ್

Pic credit - Googlr