09-01-2024

ಭಾರತ-ಅಫ್ಘಾನಿಸ್ತಾನ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರು

Author: Vinay Bhat

ಭುವನೇಶ್ವರ್ ಕುಮಾರ್

ಅಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಭಾರತದ ಪರ 5 ವಿಕೆಟ್ ಕಬಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ರವಿಚಂದ್ರನ್ ಅಶ್ವಿನ್

ಹಿರಿಯ ಸ್ಪಿನ್ನರ್ ಆರ್ ಅಶ್ವಿನ್ ಅಫ್ಘಾನಿಸ್ತಾನ ವಿರುದ್ಧದ ಮೂರು ಟಿ20 ಐಗಳಲ್ಲಿ 5 ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ.

ಲಕ್ಷ್ಮೀಪತಿ ಬಾಲಾಜಿ

ಅಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ 3.3 ಓವರ್‌ಗಳಲ್ಲಿ 19 ರನ್‌ಗಳಿಗೆ ಮೂರು ವಿಕೆಟ್ ಪಡೆದಿದ್ದಾರೆ.

ಆಶಿಶ್ ನೆಹ್ರಾ

ಆಶಿಶ್ ನೆಹ್ರಾ ಅಫ್ಘಾನ್ ವಿರುದ್ಧ ಆಡಿದ ಒಂದು T20I ನಲ್ಲಿ 3 ಅಫ್ಘಾನಿಸ್ತಾನಿ ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ.

ಯುವರಾಜ್ ಸಿಂಗ್

ಅಫ್ಘಾನಿಸಾನ್ ವಿರುದ್ಧದ ಎರಡು ಟಿ20 ಪಂದ್ಯಗಳಲ್ಲಿ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ 3 ವಿಕೆಟ್ ಪಡೆದಿದ್ದಾರೆ.

ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ ಒಂದು T20I ನಲ್ಲಿ 32 ರನ್‌ಗಳಿಗೆ ಮೂರು ಅಫ್ಘಾನಿಸ್ತಾನ ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ.

ಪ್ರವೀಣ್ ಕುಮಾರ್

ಪ್ರವೀಣ್ ಕುಮಾರ್ ಅಫ್ಘಾನಿಸ್ತಾನ ವಿರುದ್ಧ ಆಡಿದ ಒಂದು T20I ನಲ್ಲಿ ತಮ್ಮ ಖಾತೆಗೆ 2 ವಿಕೆಟ್ ಸೇರಿಸಿದ್ದಾರೆ.

ರವೀಂದ್ರ ಜಡೇಜಾ

ಪ್ರಮುಖ ವಿಕೆಟ್ ಪಡೆದವರ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಎಂಟನೇ ಸ್ಥಾನದಲ್ಲಿದ್ದಾರೆ. ಇವರು 2 ಪಂದ್ಯಗಳಲ್ಲಿ 2 ಅಫ್ಘಾನಿಸ್ತಾನಿ ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ.