ಅತಿ ಹೆಚ್ಚು ಗೆಲುವು; ಪಾಕ್ ದಾಖಲೆಯನ್ನು ಸರಿಗಟ್ಟಿದ ಭಾರತ

ಅತಿ ಹೆಚ್ಚು ಗೆಲುವು; ಪಾಕ್ ದಾಖಲೆಯನ್ನು ಸರಿಗಟ್ಟಿದ ಭಾರತ

27 November 2023

ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಇತಿಹಾಸ ಸೃಷ್ಟಿಸಿದೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಇತಿಹಾಸ ಸೃಷ್ಟಿಸಿದೆ.

ಆಸೀಸ್ ವಿರುದ್ಧದ ಈ ಗೆಲುವು ಟಿ20 ಮಾದರಿಯಲ್ಲಿ ಭಾರತಕ್ಕೆ ಇದು135ನೇ ಗೆಲುವಾಗಿದ್ದು, ಈ ಮಾದರಿಯಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ತಂಡ ಪಾತ್ರವಾಗಿದೆ.

ಆಸೀಸ್ ವಿರುದ್ಧದ ಈ ಗೆಲುವು ಟಿ20 ಮಾದರಿಯಲ್ಲಿ ಭಾರತಕ್ಕೆ ಇದು135ನೇ ಗೆಲುವಾಗಿದ್ದು, ಈ ಮಾದರಿಯಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ತಂಡ ಪಾತ್ರವಾಗಿದೆ.

ಈ ಮೂಲಕ ಈ ಚುಟುಕು ಮಾದರಿಯಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ತಂಡಗಳ ಪೈಕಿ ಭಾರತ ಹಾಗೂ ಪಾಕಿಸ್ತಾನ ಜಂಟಿ ಮೊದಲ ಸ್ಥಾನದಲ್ಲಿವೆ.

ಈ ಮೂಲಕ ಈ ಚುಟುಕು ಮಾದರಿಯಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ತಂಡಗಳ ಪೈಕಿ ಭಾರತ ಹಾಗೂ ಪಾಕಿಸ್ತಾನ ಜಂಟಿ ಮೊದಲ ಸ್ಥಾನದಲ್ಲಿವೆ.

ಟಿ20 ಕ್ರಿಕೆಟ್​ನಲ್ಲಿ 226 ಪಂದ್ಯಗಳನ್ನಾಡಿರುವ ಪಾಕಿಸ್ತಾನ 135 ಪಂದ್ಯಗಳನ್ನು ಗೆದ್ದಿದೆ. ಇದರೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಟೀಂ ಇಂಡಿಯಾ ಇದುವರೆಗೆ 211 ಟಿ20 ಪಂದ್ಯಗಳನ್ನಾಡಿದ್ದು, 135 ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ ಪಾಕ್ ತಂಡದೊಂದಿಗೆ ಜಂಟಿ ಮೊದಲ ಸ್ಥಾನದಲ್ಲಿದೆ.

ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮಾತ್ರ ಈ ಚುಟುಕು ಕ್ರಿಕೆಟ್‌ನಲ್ಲಿ 100 ಗೆಲುವಿನ ಗಡಿಯನ್ನು ತಲುಪಿರುವ ತಂಡಗಳಾಗಿವೆ.

ಕಿವೀಸ್ ತಂಡ ಇದುವರೆಗೆ 200 ಟಿ20 ಪಂದ್ಯಗಳನ್ನಾಡಿದ್ದು, ಇದರಲ್ಲಿ 102 ಗೆಲುವು ದಾಖಲಿಸಿದೆ.

ದಕ್ಷಿಣ ಆಫ್ರಿಕಾ ತಂಡ 171 ಪಂದ್ಯಗಳಲ್ಲಿ 95 ಗೆಲುವು ದಾಖಲಿಸಿದೆ.

ಏಕದಿನ ಚಾಂಪಿಯನ್ ಆಸ್ಟ್ರೇಲಿಯಾ 179 ಪಂದ್ಯಗಳಲ್ಲಿ 94 ಪಂದ್ಯಗಳನ್ನು ಗೆದ್ದಿದೆ.

ಇಂಗ್ಲೆಂಡ್ ತಂಡ 177 ಪಂದ್ಯಗಳಲ್ಲಿ 92 ಪಂದ್ಯಗಳನ್ನು ಗೆದ್ದಿದೆ.