ಭಾರತದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಟಿ20ಮಾದರಿಯಲ್ಲಿ ವೇಗವಾಗಿ 4000 ರನ್ ಪೂರೈಸಿದ ದಾಖಲೆ ಬರೆದಿದ್ದಾರೆ.
ಈ ಮೂಲಕ ಗಾಯಕ್ವಾಡ್ ಕಡಿಮೆ ಸ್ವರೂಪದಲ್ಲಿ 4000 ರನ್ ಪೂರೈಸಿದ ಐದನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ರಾಯ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಗಾಯಕ್ವಾಡ್ ಈ ಸಾಧನೆ ಮಾಡಿದ್ದಾರೆ.
ಗಾಯಕ್ವಾಡ್ 116 ಇನ್ನಿಂಗ್ಸ್‌ಗಳಲ್ಲಿ 4 ಸಾವಿರ ರನ್ ಪೂರೈಸಿದ್ದು, ಆ ಮೂಲಕ ಕೆಎಲ್ ರಾಹುಲ್ (117 ಇನ್ನಿಂಗ್ಸ್) ದಾಖಲೆ ಮುರಿದಿದ್ದಾರೆ.
ವಿಂಡೀಸ್ ತಂಡದ ವಿಧ್ವಂಸಕ ಆರಂಭಿಕ ಆಟಗಾರ ಕ್ರಿಸ್ ಗೇಲ್ (107 ಇನ್ನಿಂಗ್ಸ್) ಟಿ20ಯಲ್ಲಿ ವೇಗವಾಗಿ 4 ಸಾವಿರ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಅವರ ನಂತರ ಶಾನ್ ಮಾರ್ಷ್ (113 ಇನ್ನಿಂಗ್ಸ್), ಬಾಬರ್ ಅಜಮ್ (115 ಇನ್ನಿಂಗ್ಸ್) ಮತ್ತು ಡೆವೊನ್ ಕಾನ್ವೇ (116 ಇನ್ನಿಂಗ್ಸ್) ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇನ್ನು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರುತುರಾಜ್ ಕ್ರಮವಾಗಿ 0, 58, 123, 32 ರನ್ ಬಾರಿಸಿದ್ದಾರೆ.