09-03-2024

ವೇಗವಾಗಿ 1000 ಟೆಸ್ಟ್ ರನ್‌ಗಳನ್ನು ಕಲೆಹಾಕಿದ ಭಾರತೀಯರು

Author: Vinay Bhat

ಯಶಸ್ವಿ ಜೈಸ್ವಾಲ್

ಭಾರತೀಯ ಬ್ಯಾಟರ್ ಯಶಸ್ವಿ ಜೈಸ್ವಾಲ್ ಟೆಸ್ಟ್‌ನಲ್ಲಿ 1000 ರನ್ ಗಡಿ ದಾಟಲು ಭಾರತೀಯರ ಪೈಕಿ ಅತಿ ಕಡಿಮೆ ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.

ಯಶಸ್ವಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್ 1000 ರನ್‌ಗಳ ಗಡಿ ದಾಟಲು ಜೈಸ್ವಾಲ್ ಒಂಬತ್ತು ಪಂದ್ಯಗಳನ್ನು ತೆಗೆದುಕೊಂಡರು, ಮಾರ್ಚ್ 7 ರಂದು ಇಂಗ್ಲೆಂಡ್ ವಿರುದ್ಧ ಮೈಲಿಗಲ್ಲನ್ನು ತಲುಪಿದರು.

ಚೇತೇಶ್ವರ ಪೂಜಾರ

ಟೆಸ್ಟ್‌ನಲ್ಲಿ 1000 ರನ್‌ಗಳ ಗಡಿ ದಾಟಲು ಕಡಿಮೆ ಪಂದ್ಯಗಳನ್ನು ತೆಗೆದುಕೊಂಡ ಬ್ಯಾಟರ್‌ಗಳ ಪಟ್ಟಿಯಲ್ಲಿ ಚೇತೇಶ್ವರ ಪೂಜಾರ ಎರಡನೇ ಸ್ಥಾನದಲ್ಲಿದ್ದಾರೆ.

ಚೇತೇಶ್ವರ ಪೂಜಾರ

2013ರ ಮಾರ್ಚ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 11ನೇ ಟೆಸ್ಟ್‌ನಲ್ಲಿ ಪೂಜಾರ 1000 ರನ್‌ಗಳ ಗಡಿ ದಾಟಿದ್ದರು.

ಸುನಿಲ್ ಗವಾಸ್ಕರ್

ಪೂಜಾರ ಅವರೊಂದಿಗೆ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಇವರು1973 ರಲ್ಲಿ ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ 1000 ರನ್​ಗಳ ಗಡಿ ದಾಟಲು 11 ಟೆಸ್ಟ್ ತೆಗೆದುಕೊಂಡರು.

ವಿನೋದ್ ಕಾಂಬ್ಳಿ

ಟೆಸ್ಟ್‌ನಲ್ಲಿ 1000 ರನ್‌ಗಳ ಗಡಿಯನ್ನು ತಲುಪಲು ಕಡಿಮೆ ಪಂದ್ಯಗಳನ್ನು ತೆಗೆದುಕೊಂಡ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿನೋದ್ ಕಾಂಬ್ಳಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ವಿನೋದ್ ಕಾಂಬ್ಳಿ

ನವೆಂಬರ್ 1994 ರಲ್ಲಿ ವಾಂಖೆಡೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ನಲ್ಲಿ 1000 ರನ್ ಗಡಿಯನ್ನು ತಲುಪಲು ಕಾಂಬ್ಲಿ 12 ಟೆಸ್ಟ್‌ಗಳನ್ನು ತೆಗೆದುಕೊಂಡರು.

ಮಯಾಂಕ್ ಅಗರ್ವಾಲ್

ಟೆಸ್ಟ್‌ನಲ್ಲಿ 1000 ರನ್‌ಗಳ ಗಡಿಯನ್ನು ತಲುಪಲು ಕಡಿಮೆ ಪಂದ್ಯಗಳನ್ನು ತೆಗೆದುಕೊಂಡ ಭಾರತೀಯ ಆಟಗಾರರ ಪಟ್ಟಿಯಲ್ಲಿ ಮಯಾಂಕ್ ಅಗರ್ವಾಲ್ ಐದನೇ ಸ್ಥಾನದಲ್ಲಿದ್ದಾರೆ.

ಮಯಾಂಕ್ ಅಗರ್ವಾಲ್

2020 ರ ಡಿಸೆಂಬರ್‌ನಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 1000 ರನ್ ಗಡಿಯನ್ನು ತಲುಪಲು ಅಗರ್ವಾಲ್ 12 ಟೆಸ್ಟ್‌ಗಳನ್ನು ತೆಗೆದುಕೊಂಡರು.